ತೆಲಂಗಾಣದ ಪೆದ್ದಪಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಬಳಿ ಲಾರಿ ಮಾಲೀಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಅನಿಲ್ ಗೌಡ್ ಎಂಬ ಲಾರಿ ಮಾಲೀಕರು, ಆರ್ಟಿಒ ಅಧಿಕಾರಿಗಳು ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿ, ತಮ್ಮ ಲಾರಿ ಹತ್ತಿ ಲೈವ್ ವೈರ್‌ಗಳನ್ನು ಮುಟ್ಟುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಸಂಪೂರ್ಣ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಅನಿಲ್ ಗೌಡ್ ಅವರು, ಆರ್ಟಿಒ ಅಧಿಕಾರಿಗಳು ಪ್ರತಿ ಲಾರಿ ಮಾಲೀಕರಿಂದ ತಿಂಗಳಿಗೆ ₹8,000 ಲಂಚಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ಲಂಚ ನೀಡಲು ನಿರಾಕರಿಸಿದ್ದರಿಂದ, ಅಧಿಕಾರಿಗಳು ಅವರ ವಾಹನದ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಹೇಳಿದ್ದು, ಎಲ್ಲಾ ದಾಖಲೆಗಳು ಸರಿಯಾಗಿದ್ದರೂ, ತಮ್ಮ ಲಾರಿಯನ್ನು ಅನ್ಯಾಯವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಪರಿಸ್ಥಿತಿಯಿಂದ ಬೇಸತ್ತ ಅನಿಲ್ ಗೌಡ್, ತಮ್ಮ ಲಾರಿ ಹತ್ತಿ ನ್ಯಾಯಕ್ಕಾಗಿ ಆಗ್ರಹಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಮ್ಮ ಬಳಿ ಮಾನ್ಯವಾದ ದಾಖಲೆಗಳಿದ್ದರೂ, ತಮ್ಮ ವಿರುದ್ಧ ಏಕೆ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ತಮ್ಮ ಪ್ರತಿಭಟನೆಯ ನಂತರ, ಅನಿಲ್ ಗೌಡ್ ಅವರು ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ತಮ್ಮ ಲಾರಿಯನ್ನು ಬಿಡುಗಡೆ ಮಾಡಬೇಕು ಮತ್ತು ತಮಗೆ ನ್ಯಾಯ ಸಿಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
లంచం పేరుతో ఆర్టీఓ అధికారులు వేధిస్తున్నారని లారీ ఓనర్ నిరసన
పెద్దపల్లి ఆర్టీఓ కార్యాలయం ఎదుట కరెంటు తీగలు పట్టుకుంటానని లారీ పైకి ఎక్కి లారీ ఓనర్ అనిల్ గౌడ్ నిరసన
ఆర్టీఓ అధికారులకు మామూలు ఇవ్వనందుకు తన లారిపైన అక్రమ కేసు పెట్టారని, నెలకు ఒక్కో లారీ నుండి రూ.8000 లంచం… pic.twitter.com/f0hpJnxIAS
— Telugu Scribe (@TeluguScribe) February 16, 2025