ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಹಲವು ಸುಮಧುರ ಸಂಬಂಧಗಳ ವಿಡಿಯೋಗಳು ವೈರಲ್ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ನೆಟ್ಟಿಗರನ್ನು ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರನ್ನು ಮೋಡಿ ಮಾಡಿದೆ.
ಚಲಿಸುತ್ತಿರುವ ರೈಲಿನಲ್ಲಿ ಗಂಡನೊಬ್ಬ ತನ್ನ ಪತ್ನಿಯ ಕಾಲಿಗೆ ನೇಲ್ಪಾಲಿಷ್ ಹಚ್ಚುವ ವಿಡಿಯೋ ಇದಾಗಿದೆ. ಇನ್ಸ್ಟಾಗ್ರಾಮ್ ಬಳಕೆದಾರರಾದ ದಿಲೀಪ್ ಸೋಲಂಕಿ ಅವರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ದಂಪತಿ ರೈಲು ಕಂಪಾರ್ಟ್ಮೆಂಟ್ನಲ್ಲಿ ಕುಳಿತಿರುವುದನ್ನು ಕಾಣಬಹುದು. ಮಧ್ಯವಯಸ್ಕ ದಂಪತಿ ರೈಲಿನಲ್ಲಿ ಎರಡು ವಿಭಿನ್ನ ಬರ್ತ್ಗಳಲ್ಲಿ ಕುಳಿತಿದ್ದಾರೆ. ಮಹಿಳೆಯು ತನ್ನ ಪತಿ ಕುಳಿತಿರುವ ಬರ್ತ್ನಲ್ಲಿ ತನ್ನ ಪಾದಗಳನ್ನು ಇಡುತ್ತಾಳೆ. ಪತಿ ತಾಳ್ಮೆಯಿಂದ ಅವಳ ಕಾಲ್ಬೆರಳುಗಳ ಉಗುರಿಗೆ ಬಣ್ಣವನ್ನು ಹಚ್ಚುವ ದೃಶ್ಯ ಇದರಲ್ಲಿ ಕಾಣಬಹುದಾಗಿದೆ..
ಅಕ್ಟೋಬರ್ 16 ರಂದು ಪೋಸ್ಟ್ ಮಾಡಲಾದ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ 1 ದಶಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ. ಅದರಲ್ಲಿಯೂ ಮಹಿಳೆಯರು ಎಂಥ ಅದೃಷ್ಟವಂತೆ ಈಕೆ ಎಂದು ಬಣ್ಣಿಸುತ್ತಿದ್ದಾರೆ. ಇಂಥ ಗಂಡ ಎಲ್ಲರಿಗೂ ಸಿಗಬಾರದೇ ಎಂದು ಹಾರೈಸುತ್ತಿದ್ದಾರೆ.