ಬೃಹತ್ ಆಫ್ರಿಕನ್ ಸಿಂಹವೊಂದು ಪ್ರವಾಸಿಗರನ್ನು ತುಂಬಿದ್ದ ಸಫಾರಿ ಜೀಪ್ ನೊಂದಿಗೆ ಹಗ್ಗಜಗ್ಗಾಟವಾಡಿರುವ ಆಕರ್ಷಕ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ದಕ್ಷಿಣ ಆಫ್ರಿಕಾದ ಸಫಾರಿ ಪಾರ್ಕ್ ನಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಲಾಗಿದ್ದು, ಸದ್ಯ ಭಾರಿ ವೈರಲ್ ಆಗಿದೆ.
ಸಿಂಹವು ಜೀಪಿಗೆ ಕಟ್ಟಲಾಗಿದ್ದ ಹಗ್ಗವನ್ನು ಬಿಗಿಯಾಗಿ ಹಿಡಿದು ಎಳೆದಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸಫಾರಿ ಜೀಪ್ ನ ಹಗ್ಗವನ್ನು ತನ್ನ ಬಾಯಿಯಲ್ಲಿ ಹಿಡಿದು ಬಲವಾಗಿ ಎಳೆದಿದೆ. ಸಫಾರಿ ಜೀಪ್ ಮುಂದೆ ಹೋಗಲು ಪ್ರಯತ್ನಪಟ್ಟರೂ ಕೂಡ ಸಾಧ್ಯವಾಗಿಲ್ಲ. ಅದು ಮತ್ತಷ್ಟು ಬಿಗಿಯಾಗಿ ಹಿಡಿದುಕೊಂಡಿತು.
ಸಫಾರಿ ಜೀಪ್ ಅನ್ನು ಬಲವಾಗಿ ಎಳೆದಿದ್ದರಿಂದ ಮರದ ಹಿಂದೆ ಸಿಕ್ಕಿಹಾಕಿಕೊಂಡು ಹಗ್ಗವನ್ನು ಬಿಟ್ಟು ಬಿಟ್ಟರೂ, ಮತ್ತೆ ಬಂದು ಗಟ್ಟಿಯಾಗಿ ಹಿಡಿದುಕೊಂಡಿದೆ. ಇದರಿಂದ ಸಿಂಹವನ್ನು ವಾಹನವು ಕೆಲವು ಮೀಟರ್‌ಗಳಷ್ಟು ಎಳೆದೊಯ್ದಿದೆ. ವಿಡಿಯೋ ಕ್ಲಿಪ್‌ನ ಕೊನೆಯಲ್ಲಿ, ಸಿಂಹ ತನ್ನ ಬಾಯಿಯಲ್ಲಿ ಹಗ್ಗವನ್ನು ಇನ್ನೂ ಗಟ್ಟಿಯಾಗಿ ಹಿಡಿದುಕೊಂಡು ನಿಂತಿರುವುದನ್ನು ಕಾಣಬಹುದು.
ಜೈಲಿನಿಂದ ಬಿಡುಗಡೆಗೂ ಮುನ್ನ FBಯಲ್ಲಿ ಬಿಜೆಪಿ ನಾಯಕನ ಪೋಸ್ಟ್….!
ನವೆಂಬರ್ 18 ರಂದು ದಕ್ಷಿಣ ಆಫ್ರಿಕಾದ ಬಾಬಾಬ್ ರಿಡ್ಜ್ ಗೇಮ್ ಲಾಡ್ಜ್ ಮೂಲಕ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದಾಗ ಸಿಂಹ ಕಾಣಿಸಿಕೊಂಡಿದೆ ಎಂದು ಪ್ರವಾಸಿ ಮಾರ್ಗದರ್ಶಿ ಜಬುಲಾನಿ ಸಲಿಂಡಾ ಹೇಳಿದ್ದಾರೆ.
ಈ ಪ್ರದೇಶದಲ್ಲಿ ಗಂಡು ಸಿಂಹದ ಬಗ್ಗೆ ಜಬುಲಾನಿಗೆ ಅವರ ಸಹೋದ್ಯೋಗಿಯೊಬ್ಬರು ಈಗಾಗಲೇ ಎಚ್ಚರಿಸಿದ್ದಾರೆ. ಜೀಪ್ ಮಣ್ಣಿನಲ್ಲಿ ಸಿಲುಕಿದ ನಂತರ ಸಿಂಹ ಕಾಣಿಸಿಕೊಂಡಿದೆ. ಜೀಪ್ ಅನ್ನು ಎಳೆದ ನಂತರ, ಅದನ್ನು ಎಳೆಯಲು ಬಳಸಲಾಗಿದ್ದ ಹಗ್ಗದ ತುದಿಯನ್ನು ಸಿಂಹ ಹಿಡಿದುಕೊಂಡಿದೆ. ಹಗ್ಗವನ್ನು ಹಿಂದಕ್ಕೆ ಎಳೆಯುವ ಮುನ್ನವೇ ಅದು ಸಿಂಹದ ಕಣ್ಣಿಗೆ ಬಿದ್ದು, ಕೆಲಹೊತ್ತು ಹಗ್ಗಜಗ್ಗಾಟ ನಡೆದಿದೆ.
ಸಿಂಹದ ಚೇಷ್ಟೆಯಿಂದ ಅದು ಜೀಪಿನ ಹತ್ತಿರಕ್ಕೆ ಬರಬಹುದು ಅಂತಾ ಪ್ರವಾಸಿಗರು ಭೀತಿಗೊಂಡಿದ್ದರಂತೆ. ಹೆಣ್ಣು ಸಿಂಹಗಳ ಗುಂಪು ಬಂದಾಗ ಗಂಡು ಸಿಂಹ ಹಗ್ಗವನ್ನು ಬಿಟ್ಟಿದೆ. ಇದರಿಂದ ಹಗ್ಗಜಗ್ಗಾಟ ಅಲ್ಲಿಗೆ ಕೊನೆಗೊಂಡಿದೆ.