ಮುಂಬೈ ಎಂಬ ಬೃಹತ್ ವಾಣಿಜ್ಯ ನಗರದಲ್ಲಿ ಗೋರೆಗಾಂವ್ ಪೂರ್ವ ಪ್ರದೇಶದಲ್ಲಿ ಈಗಲೂ ಸ್ವಲ್ಪ ಕಾಡುಮೇಡುಗಳನ್ನು ಕಾಣಬಹುದಾಗಿದೆ. ಮೂಲತಃ ಇದು ಅರಣ್ಯ ಪ್ರದೇಶವಾಗಿದ್ದು, ನಂತರ ನಗರಾಭಿವೃದ್ಧಿ ಹೆಸರಲ್ಲಿ ಆರ್ರೆ ಕಾಲೊನಿ ಮತ್ತು ಫಿಲ್ಮ್ ಸಿಟಿಗಳು ತಲೆ ಎತ್ತಿವೆ. ಆದರೆ, ನಮ್ಮ ವಾಸಸ್ಥಾನವನ್ನು ಮಾತ್ರ ಅರಣ್ಯದ ಪ್ರಾಣಿಗಳು ಬಿಟ್ಟುಕೊಡಲು ತಯಾರಿಲ್ಲ. ಅವುಗಳಿಗೆ ಕಾಡಿನಲ್ಲಿ ಆಹಾರ ಕಡಿಮೆ ಮಾಡಿದ ಮನುಷ್ಯನ ಆವಾಸ ಸ್ಥಾನಕ್ಕೆ ಸದ್ಯ ನುಗ್ಗಿ ದಾಳಿ ನಡೆಸಲು ಶುರು ಮಾಡಿವೆ.
ಇತ್ತೀಚೆಗೆ ಚಿರತೆಯೊಂದು ಗೋರೆಗಾಂವ್‌ನ ಗೋಕುಲ್‌ಧಾಮ್ ಪ್ರದೇಶಕ್ಕೆ ನುಗ್ಗಿ, ಅಲ್ಲಿನ ರಸ್ತೆಗಳಲ್ಲಿ ರಾತ್ರಿಯಿಡೀ ಆರಾಮಾಗಿ ಓಡಾಡಿದೆ. ಸಿಸಿ ಟಿವಿಗಳಲ್ಲಿ ದೃಶ್ಯ ಸೆರೆಯಾಗಿದೆ. ಇದನ್ನು ಟ್ವಿಟರ್‌ನಲ್ಲಿ ನಿವಾಸಿಗರು ಹಂಚಿಕೊಂಡಿದ್ದು, ವಿಡಿಯೊ ವೈರಲ್ ಕೂಡ ಆಗಿದೆ.
ಅಥ್ಲೀಟ್‌ಗಳನ್ನೇ ರೇಸ್‌ನಲ್ಲಿ ಹಿಂದಿಕ್ಕಿದ ಕ್ಯಾಮೆರಾಮನ್….! ನೋಡುಗರನ್ನು ದಂಗಾಗಿಸಿದೆ ವಿಡಿಯೋ
ಹಸಿದ ಚಿರತೆಗಳು ನಾಯಿಗಳ ಬೇಟೆಗೆ ಕಾಲೋನಿಗೆ ಬಂದಿವೆ. ಚಿರತೆ ಮರಳಿ ಅರಣ್ಯಕ್ಕೆ ತೆರಳಿದೆಯೇ ಅಥವಾ ಕಾಲೋನಿಯಲ್ಲಿಅಡಗಿದೆಯೇ ಎಂಬ ಬಗ್ಗೆ ಕೂಲಂಕುಷ ಪರಿಶೀಲನೆಯನ್ನು ನಡೆಸುತ್ತೇವೆ ಎಂದು ಆತಂಕಗೊಂಡ ನಿವಾಸಿಗರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಭರವಸೆ ಕೊಟ್ಟಿದ್ದಾರೆ. ಅಂದಹಾಗೆ ಓಡಾಡಿರುವ ಚಿರತೆಯು ಕಳೆದ ವರ್ಷ ನವೆಂಬರ್‌ನಲ್ಲಿ ಕೂಡ ಮುಂಬೈ ನಗರಕ್ಕೆ ಬಂದಿತ್ತು. ಆ ವೇಳೆಯೇ ಸೆರೆ ಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿಯು ಅದರ ಕುತ್ತಿಗೆಗೆ ರೇಡಿಯೋ ಕಾಲರ್ ಅಳವಡಿಸಿದ್ದರು. ಅದನ್ನು ಸಿಸಿ ಟಿವಿಯಲ್ಲಿ ಕಾಣಬಹುದಾಗಿದೆ.