ಕಾಡು ಪ್ರಾಣಿಗಳು ಆಗಾಗ ಜನನಿಬಿಡ ಪ್ರದೇಶಗಳಲ್ಲಿ ಕಾಣಿಸಿಕೊಳ್ಳೋದು ಸಾಮಾನ್ಯವಾಗಿದ್ದರೂ ಸಹ ಕೆಲವೊಮ್ಮೆ ಸಣ್ಣ ಅಜಾಗರೂಕತೆಯಿಂದ ದೊಡ್ಡ ಅವಘಡವೇ ಸಂಭವಿಸಬಹುದು.
ಮಹಾರಾಷ್ಟ್ರದ ಅಹಮದ್ನಗರ ಜಿಲ್ಲೆಯ ಅರಣ್ಯಾಧಿಕಾರಿಗಳು ಸಹ ಇಂತಹದ್ದೇ ಒಂದು ಸವಾಲನ್ನ ಎದುರಿಸುವಂತಾಯ್ತು. ಗಂಡು ಎಂದು ಶಂಕಿಸಲಾದ ಈ ಚಿರತೆಯು ಗಾಯಗೊಂಡ ಸ್ಥಿತಿಯಲ್ಲಿತ್ತು ಹಾಗೂ ಇದು ಶಾಲೆಯೊಂದರ ಕ್ಯಾಂಟೀನ್ ಒಳಕ್ಕೆ ನುಗ್ಗಿದೆ ಎನ್ನಲಾಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಎಸ್ಒಎಸ್ ರಕ್ಷಣಾ ಪಡೆ ಚಿರತೆಯ ರಕ್ಷಣೆಗೆ ಸ್ಥಳಕ್ಕೆ ಬಂದಿದೆ.
ವೈಲ್ಡ್ಲೈಫ್ ಎಸ್ಒಎಸ್ ಯುಟ್ಯೂಬ್ನಲ್ಲಿ ಚಿರತೆ ಸೆರೆಯ ವಿಡಿಯೋವನ್ನ ಪೋಸ್ಟ್ ಮಾಡಿದೆ. ಬರೋಬ್ಬರಿ 4 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಧೋಕೇಶ್ವರ ಗ್ರಾಮದ ಜವಾಹರ ನವೋದಯ ವಿದ್ಯಾಲಯದಲ್ಲಿ ಚಿರತೆಯನ್ನ ಸೆರೆ ಹಿಡಿಯಲಾಗಿದೆ. ವಿಡಿಯೋದಲ್ಲಿ ಚಿರತೆಯು ಶಾಲೆಯ ಕ್ಯಾಂಟೀನ್ ಒಳಕ್ಕೆ ನುಗ್ಗಿದ್ದನ್ನ ಕಾಣಬಹುದಾಗಿದೆ.
ಚಿರತೆಯನ್ನ ಪ್ರಸ್ತುತ ಜುನ್ನಾರ್ನ ಮಾನಿ ಮಾಣಿಕ್ಡೋ ಚಿರತೆ ರಕ್ಷಣಾ ಕೇಂದ್ರದಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.