
ವಾಷಿಂಗ್ಟನ್ ಪೋಸ್ಟ್ ವರದಿಗಾರ ಝಾಕ್ ಪರ್ಸರ್ ಬ್ರೌನ್ ಅವರು ಹಂಚಿಕೊಂಡ ವಿಡಿಯೋದಲ್ಲಿ 78 ವರ್ಷ ವಯಸ್ಸಿನ ಅಮೆರಿಕಾ ಅಧ್ಯಕ್ಷರಿಗೆ ನಿದ್ದೆ ಬರುತ್ತಿರುವಂತೆ ತೋರುತ್ತಿದೆ. ಸಭೆಯಲ್ಲಿ ಆಲಿಸುತ್ತಾ ತಮ್ಮ ಕಣ್ಣುಗಳನ್ನು ಮುಚ್ಚಿ ತೆರೆದಿದ್ದಾರೆ.
ಅಂಗವೈಕಲ್ಯ ಹಕ್ಕುಗಳ ಕಾರ್ಯಕರ್ತ ಎಡ್ಡಿ ಎನ್‌ಡೋಪು ಅವರು ಸಭೆಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಬಿಡೆನ್ ಕಣ್ಣುಮುಚ್ಚಿ ತಕ್ಷಣವೇ ತೆರೆದಿದ್ದಾರೆ. ಕೆಲವು ಸೆಕೆಂಡುಗಳ ನಂತರ ಮತ್ತೆ ಕಣ್ಣುಮುಚ್ಚಿ ತೆರೆದಿದ್ದಾರೆ. ಮಾತುಗಳನ್ನು ಕೇಳುವಾಗ ಬಿಡೆನ್ ಕಣ್ಣು ಮುಚ್ಚಿದ್ದಾರೆ.
COP26 ಭಾಷಣದ ವೇಳೆ ಜೋ ಬಿಡೆನ್ ನಿದ್ರಿಸುತ್ತಿರುವಂತೆ ತೋರುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿಗಾರ ಝಾಕ್ ಪರ್ಸರ್ ಬ್ರೌನ್ ಟ್ವಿಟ್ಟರ್‌ನಲ್ಲಿ ವಿಡಿಯೋ ಸಹಿತ ಟ್ವೀಟ್ ಮಾಡಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 4.6 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಕೆಲವರು ಅಮೆರಿಕಾ ಅಧ್ಯಕ್ಷರ ನಿದ್ದೆಯನ್ನು ಅಪಹಾಸ್ಯ ಮಾಡಿದ್ರೆ, ಇನ್ನೂ ಕೆಲವರು ಸಮರ್ಥಿಸಿಕೊಂಡಿದ್ದಾರೆ.