
ಎಮ್ಮೆ ಕಳ್ಳತನ ಪ್ರಕರಣದಲ್ಲಿ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಫರಿದಾಬಾದ್ (ಹರಿಯಾಣ) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಿಕ್ಕಿಬಿದ್ದಿದ್ದಾರೆ. ವಿಜಿಲೆನ್ಸ್ ವಿಭಾಗದ ತಂಡ ಈತನನ್ನು ಹಿಡಿಯುತ್ತಿದ್ದಂತೆಯೇ ಕರೆನ್ಸಿ ನೋಟುಗಳನ್ನು ನುಂಗಲು ಅಧಿಕಾರಿ ಪ್ರಯತ್ನಿಸಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪೊಲೀಸ್ ಅಧಿಕಾರಿ ಮಹೇಂದ್ರ ಪಾಲ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಕೂಡಲೇ ಕರೆನ್ಸಿ ನೋಟುಗಳನ್ನು ನುಂಗಲು ಯತ್ನಿಸಿದ್ದಾರೆ. ಎಮ್ಮೆಯನ್ನು ಕದ್ದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಇರಲು ವ್ಯಕ್ತಿಯೊಬ್ಬರಿಂದ ಇವರು ಲಂಚ ಪಡೆದಿರುವ ಆರೋಪ ಎದುರಿಸುತ್ತಿದ್ದಾರೆ.
ಎಮ್ಮೆ ಕಳ್ಳತನ ಪ್ರಕರಣದ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲು ಸಂತ್ರಸ್ತ ಶುಭನಾಥ್‌ನಿಂದ ಪೊಲೀಸರು 10,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಸಂತ್ರಸ್ತೆ ಈಗಾಗಲೇ ಅಧಿಕಾರಿಗೆ 6,000 ರೂಪಾಯಿ ನೀಡಿದ್ದರು, ಆದರೆ ನಂತರ ಅವರು ಅಧಿಕಾರಿ ವಿರುದ್ಧ ವಿಜಿಲೆನ್ಸ್ ಇಲಾಖೆಗೆ ದೂರು ನೀಡಲು ನಿರ್ಧರಿಸಿದರು. ವಿಜಿಲೆನ್ಸ್ ಬಲೆ ಬೀಸಿದ್ದು, ಪೊಲೀಸರು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
57 ಸೆಕೆಂಡ್‌ಗಳ ವೀಡಿಯೊ ಭಾರಿ ಹಂಗಾಮ ಸೃಷ್ಟಿಸಿದೆ. ಹಣ ನುಂಗದಂತೆ ತಡೆಯಲು ತನಿಖಾಧಿಕಾರಿ ಪೊಲೀಸ್ ಅಧಿಕಾರಿಯ ಬಾಯಿಗೆ ಕೈ ಹಾಕುತ್ತಿರುವುದನ್ನು ನೋಡಬಹುದಾಗಿದೆ.