ಚಿಕ್ಕಬಳ್ಳಾಪುರ: ನಕಲಿ ಬೆತ್ತಲೆ ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿ ಶಿಕ್ಷಕನಿಂದ 9.99 ಲಕ್ಷ ರೂ. ಪಡೆದು ವಂಚಿಸಿದ ಘಟನೆ ನಡೆದಿದ್ದು, ಚಿಕ್ಕಬಳ್ಳಾಪುರ ಸೈಬರ್ ಠಾಣೆಗೆ ದೂರು ನೀಡಿಲ್ಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಿವಾಸಿಯಾಗಿರುವ ಚಿಕ್ಕಬಳ್ಳಾಪುರದಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವ್ಯಕ್ತಿ ವಂಚನೆಗೊಳಗಾದವರು. ಸೋರಿಯಾಸಿಸ್ ಚರ್ಮರೋಗ ಕಾಯಿಲೆ ವಾಸಿಗಾಗಿ ಫೇಸ್ಬುಕ್ ನಲ್ಲಿ ದೊರೆತ ಲಿಂಕ್ ಬಳಸಿ ಅದರಲ್ಲಿ ತಿಳಿಸಿದಂತೆ ಚರ್ಮ ಕಾಯಿಲೆ ತೋರಿಸಿದ ವಿಡಿಯೋ ಕಳಿಸಿದ್ದಾರೆ. ಅವರು ಅರೆಬೆತ್ತಲಾಗಿದ್ದ ವಿಡಿಯೋ ಸಂಪೂರ್ಣ ಬೆತ್ತಲಾದಂತೆ ಸೃಷ್ಟಿಸಿ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಲಾಗಿದೆ.
ಅವರು ಹೇಳಿದ ಖಾತೆಗೆ ಶಿಕ್ಷಕ ಹಂತ ಹಂತವಾಗಿ ಹಣ ಹಾಕಿದ್ದಾರೆ. ಕೊನೆಗೆ ವಂಚನೆಗೊಳಗಾಗಿರುವುದನ್ನು ತಿಳಿದು ಚಿಕ್ಕಬಳ್ಳಾಪುರ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.