ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದ ಹೃದಯವಿದ್ರಾವಕ ವಿಡಿಯೊ, ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಗಮನಸೆಳೆಯುತ್ತಿವೆ, ಕೆಲವಂತೂ ಕರುಳು ಚುರುಕ್ ಎನ್ನುವಂತಿವೆ. ಸ್ಥಳೀಯರು ಯುದ್ಧದಲ್ಲಿ ಕಳೆದುಕೊಂಡವರ ಬಗ್ಗೆ ದುಃಖಿಸುತ್ತಿರುವುದನ್ನು ಸಹ ಕಾಣಬಹುದು.
ಇದೀಗ ಯುದ್ಧದ ಮಧ್ಯೆ ಮೃತರಾದ ಮಕ್ಕಳ ಸಂಕೇತವಾಗಿ ಎಲ್ವಿವ್‌ನ ಸೆಂಟ್ರಲ್ ಸ್ಕ್ವೇರ್‌ನಲ್ಲಿ ಖಾಲಿ ಸ್ಟ್ರಾಲರ್ಸ್ (ಪುಟ್ಟ ಮಕ್ಕಳನ್ನು ಕರೆದೊಯ್ಯುವ ತಳ್ಳುಗಾಡಿ) ಸಾಲಾಗಿ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.
ಸತ್ತವರ ಬಗ್ಗೆ ಶೋಕಿಸಲು ಮತ್ತು ರಷ್ಯಾದ ಆಕ್ರಮಣದಿಂದ ದೇಶದಲ್ಲಿ ಕೊಲ್ಲಲ್ಪಟ್ಟ ಮಕ್ಕಳನ್ನು ಸ್ಮರಿಸಲು ನೂರಾರು ಖಾಲಿ ತಳ್ಳುಗಾಡಿಗಳನ್ನು ಇಟ್ಟಿದ್ದು ಕರಳು ಹಿಂಡುವಂತೆ ಕಾಣಿಸುತ್ತಿದೆ.
ಯುದ್ಧದ ಪ್ರಾರಂಭದಿಂದಲೂ ಕೊಲ್ಲಲ್ಪಟ್ಟ ಪ್ರತಿ ಮಗುವಿಗೆ ಒಂದರ ಲೆಕ್ಕದಲ್ಲಿ 109 ಸ್ಟ್ರಾಲರ್ಸ್‌ಗಳನ್ನು ಸಾಲುಗಳಲ್ಲಿ ಇರಿಸಲಾಗಿದೆ ಎಂದು ಉಕ್ರೇನಿಯನ್ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಿಮ್ಮ ಮಕ್ಕಳು ಚಿಕ್ಕವರಾಗಿದ್ದಾಗ ಮತ್ತು ಈ ರೀತಿಯ ಸ್ಟ್ರಾಲರ್‌ಗಳಲ್ಲಿ ಕುಳಿತಿರುವಾಗ ಅವರನ್ನು ನೆನಪಿಸಿಕೊಳ್ಳಿ ಎಂದು ಉಕ್ರೇನಿಯನ್ ಮೂಲದ ಕೆನಡಾದ ಪ್ರಜೆ ಜುರಾವ್ಕಾ ನಟಾಲಿಯಾ ಟೊಂಕೊವಿಟ್ ಅವರ ಫೋಟೋ ಕುರಿತ ಪ್ರತಿಕ್ರಿಯೆ ಮನಮುಟ್ಟುವಂತಿದೆ.
ಇದೇ ವೇಳೆ ರಷ್ಯಾವು ಪ್ರತಿಕ್ರಿಯೆ ನೀಡಿ ಉಕ್ರೇನ್‌ನಲ್ಲಿ ತನ್ನ ಕ್ರಮವು ವಿಶೇಷ ಮಿಲಿಟರಿ ಕಾರ್ಯಾಚರಣೆಯಾಗಿದೆ ಮತ್ತು ಅದು ನಾಗರಿಕರನ್ನು ಗುರಿಯಾಗಿಸಿಕೊಂಡಿಲ್ಲ ಹೇಳಿದೆ.
ವಿಶ್ವಸಂಸ್ಥೆಯು ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಯುದ್ಧ ಪ್ರಾರಂಭವಾದಾಗಿನಿಂದ ಉಕ್ರೇನ್‌ನಲ್ಲಿ ಕನಿಷ್ಠ 816 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ.
Video: Empty Strollers Lined Up In Lviv’s Central Square As Symbol Of Children Killed In Ukraine Amid War | WATCH