
ಸೋಶಿಯಲ್ ಮೀಡಿಯಾದಲ್ಲಿ ಅಂತಹದ್ದೇ ಅಪರೂಪದ ಜೋಡಿಯ ವಿಡಿಯೋ ವೈರಲ್ ಆಗಿದೆ. ಇವರಿಬ್ಬರಿಗೂ ವಯಸ್ಸಾಗಿರಬಹುದು, ಆದರೆ ಒಬ್ಬರಿಗೊಬ್ಬರು ಪ್ರೀತಿ, ಗೌರವ ಕೊಡುತ್ತಿರುವ ಪರಿ ನೋಡ್ತಿದ್ರೆ. ಇದ್ದರೆ ಹೀಗಿರಬೇಕು ಅಂತ ಅನ್ನಿಸದೇ ಇರೋಲ್ಲ.
ತಮಿಳುನಾಡಿನ ಆದಿಯೋಗಿ ಶಿವನ ಪ್ರತಿಮೆಯ ಮುಂದೆ ನಿಂತು ಪೋಟೋ ತೆಗೆಸಿಕೊಳ್ಳಬೇಕು ಅನ್ನೊ ಆಸೆ ತುಂಬಾ ಜನರಿಗೆ ಇರುತ್ತೆ. ಈ ವೃದ್ಧ ಮಹಿಳೆಗೂ ಅಲ್ಲಿಗೆ ಹೋದಾಕ್ಷಣ ಸಹಜವಾಗಿ ಅನಿಸಿದೆ. ಆಗ ಆಕೆ ತನ್ನ ವೃದ್ಧ ಪತಿಗೆ ತನ್ನ ಫೋಟೋ ತಗೆಯಲು ಹೇಳಿದ್ದಾರೆ. ಆಗ ಆತ ತನ್ನ ಹೆಂಡತಿಯ ಪರ್ಫೆಕ್ಟ್ ಶಾಟ್ ಅನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಾರೆ. ಕ್ಯಾಮರಾ ಕೈಯಲ್ಲಿ ಹಿಡಿದು ಬಗ್ಗಿ, ಹೆಂಡತಿ ಹಾಗೂ ಶಿವನ ಮೂರ್ತಿ ಎರಡು ಒಟ್ಟಿಗೆ ಬರುವಂತೆ ಫೋಟೋ ತೆಗೆಯಲು ಪ್ರಯತ್ನಿಸುತ್ತಾರೆ. ಆತ ಪಡ್ತಿರೋ ಕಷ್ಟ ನೋಡಿ ಆತನ ಪತ್ನಿಗೆ ನಗು ತಡೆದುಕೊಳ್ಳಲಾಗಿಲ್ಲ. ಇದು ನೋಡಲು ತಮಾಷೆ ಅಂತ ಅನಿಸಬಹುದು. ಆದರೆ ಆತ ತನ್ನ ಪತ್ನಿಯನ್ನ ಎಷ್ಟು ಇಷ್ಟಪಡ್ತಿರಬಹುದು ಅನ್ನೊದಕ್ಕೆ, ಆ ಕ್ಷಣ ಸಾಕ್ಷಿಯಾಗಿತ್ತು. ಅಲ್ಲೇ ಇದ್ದ ವ್ಯಕ್ತಿಯೊಬ್ಬ ಇವರಿಬ್ಬರ ಈ ಮರೆಯಲಾಗದ ಕ್ಷಣಗಳನ್ನ ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಾರೆ.
ಯೋಗ ವಿತ್ ಕುಶ್ ಅನ್ನುವವರು ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಈ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ. ಹಾಗೂ ಶೀರ್ಷಿಕೆಯಲ್ಲಿ ಪ್ರೀತಿ= ಪ್ರಯತ್ನ. ಆದಿಯೋಗಿ ಕ್ಷೇತ್ರದಲ್ಲಿ ಕಂಡು ಬಂದ ಅದ್ಭುತವಾದ ಪ್ರೀತಿಯ ಪ್ರದರ್ಶನ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿದವರೆಲ್ಲರೂ ಈ ಆರ್ಟಿಫಿಶಿಯಲ್ ಲೈಫ್‌ನಲ್ಲಿ ಇದೇ ನಿಜವಾದ ಪ್ರೀತಿ ಅನ್ನುವ ಅರ್ಥದಲ್ಲಿ ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.