ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಡ್ ತಾಲೂಕಿನ ವಥಾರ್ ಗ್ರಾಮದಲ್ಲಿ ಪೆಟ್ರೋಲ್ ಪಂಪ್ ನೌಕರನ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿ, 1.2 ಲಕ್ಷ ರೂ. ದೋಚಿರುವ ಘಟನೆ ನಡೆದಿದೆ.
ಬುಧವಾರ ಮಧ್ಯರಾತ್ರಿ ಪೆಟ್ರೋಲ್ ತುಂಬಿಸಲು ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಈ ಕೃತ್ಯ ಎಸಗಿದ್ದಾರೆ. ಪೆಟ್ರೋಲ್ ಪಂಪ್ ನೌಕರ ಪರಶುರಾಮ್ ಸಿದ್ಧಾರ್ಥ್ ದುಕಾಟೆ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿ, ಹಣದ ಚೀಲವನ್ನು ದೋಚಿದ್ದಾರೆ.
ದುಷ್ಕರ್ಮಿಗಳು ಮೊದಲು ಪೆಟ್ರೋಲ್ ಹಣವನ್ನು ಪಾವತಿಸಿ, ನೌಕರ ಹಣವನ್ನು ಚೀಲದಲ್ಲಿ ಹಾಕುತ್ತಿದ್ದಂತೆ ಕುಡುಗೋಲಿನಿಂದ ಹಲ್ಲೆ ಮಾಡಿದ್ದಾರೆ. ನಂತರ ಹಣದ ಚೀಲವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಗಾಯಗೊಂಡ ದುಕಾಟೆ ಮ್ಯಾನೇಜರ್ ನಿಲೇಶ್ ಕುಮಾರ್ ತಾವರೆ ಮತ್ತು ಮಾಲೀಕ ಋಷಿಕೇಶ್ ಗಾವಡೆ ಅವರಿಗೆ ಘಟನೆಯ ಬಗ್ಗೆ ತಿಳಿಸಿದ್ದಾರೆ. ಕರಡ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
कराडमधील पेट्रोल पंपावर कोयत्याने वार करत लुटले सव्वा लाख
आता “थांबायचं नाय, गड्या थांबायचं नाय”, pic.twitter.com/RIEmrQtOn3
— Shekhar (@Shekharcoool5) March 12, 2025