alex Certify ಪ್ಯಾರಾಸೈಲಿಂಗ್​ ಮಾಡ್ತಿದ್ದ ವೇಳೆ ತುಂಡಾದ​ ಹಗ್ಗ..! ಮುಗಿಲೆತ್ತರದಿಂದ ಸಮುದ್ರಕ್ಕೆ ಬಿದ್ದ ದಂಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಯಾರಾಸೈಲಿಂಗ್​ ಮಾಡ್ತಿದ್ದ ವೇಳೆ ತುಂಡಾದ​ ಹಗ್ಗ..! ಮುಗಿಲೆತ್ತರದಿಂದ ಸಮುದ್ರಕ್ಕೆ ಬಿದ್ದ ದಂಪತಿ

ಸಮುದ್ರದ ಮೇಲೆ ಪ್ಯಾರಾಸೈಲಿಂಗ್​ ಮಾಡುತ್ತಾ ಹಾರಾಟ ನಡೆಸೋದೇ ಒಂದು ಮಜಾ. ಆದರೆ ಇದರಲ್ಲಿ ಕೊಂಚ ಯಾಮಾರಿದ್ರೂ ಸಹ ಜೀವಕ್ಕೆ ಅಪಾಯವಾಗುವಂತಹ ಸಂದರ್ಭ ಬಂದೆದುರಾಗಬಹುದು. ದಿಯು ಸಮುದ್ರ ತೀರದಲ್ಲಿ ಪ್ಯಾರಾಸೈಲಿಂಗ್​ ಮಾಡುತ್ತಿದ್ದ ವೇಳೆ ಪ್ಯಾರಾಚೂಟ್​ನ ಹಗ್ಗ ತುಂಡಾದ ಪರಿಣಾಮ ದಂಪತಿ ಸಮುದ್ರಕ್ಕೆ ಬಿದ್ದಿದ್ದಾರೆ.

ಹಗ್ಗ ತುಂಡಾಗುತ್ತಿದ್ದಂತೆಯೇ ಅಜಿತ್​ ಕಥಾಡ್​ ಹಾಗೂ ಸರಳ ಕಥಾಡ್​ ದಂಪತಿ ಆಘಾತಕ್ಕೊಳಗಾದರು. ದಿಯುವಿನ ನಾಗೋವಾ ಕಡಲಿನಲ್ಲಿ ಪ್ಯಾರಾಸೈಲಿಂಗ್​ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗಿದೆ.

ಗುಜರಾತ್​ ಮೂಲದವರಾದ ಈ ದಂಪತಿಯು ಭಾನುವಾರ ರಜೆಯನ್ನು ಎಂಜಾಯ್​ ಮಾಡೋಕೆ ದಿಯುಗೆ ಆಗಮಿಸಿದ್ದರು. ಅದೃಷ್ಟವಶಾತ್​​ ಸಮುದ್ರಕ್ಕೆ ಬಿದ್ದರೂ ಯಾವುದೇ ಗಾಯವೂ ಆಗದಂತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಬೀಚ್​ನಲ್ಲಿ ಲೈಫ್​ ಗಾರ್ಡ್​ಗಳು ಕೂಡಲೇ ದಂಪತಿಯತ್ತ ಧಾವಿಸಿದ್ದಾರೆ. ಅಲ್ಲದೇ ದಂಪತಿ ಧರಿಸಿದ್ದ ಲೈಫ್​ ಜಾಕೆಟ್​ ಕೂಡ ಅವಘಡದಿಂದ ಅವರನ್ನು ಕಾಪಾಡಿದೆ.

ಎದೆ ಝಲ್​ ಎನ್ನಿಸುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿದೆ. ಮುಗಿಲೆತ್ತರಕ್ಕೆ ಹಾರಿದ್ದ ದಂಪತಿಯ ಪ್ಯಾರಾಚೂಟ್​ ಹಗ್ಗ ಕಟ್​ ಆದ ಪರಿಣಾಮ ಅವರು ಸಮುದ್ರಕ್ಕೆ ಬೀಳುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಪವರ್​ ಬೋಟ್​ನಲ್ಲಿ ಅಜಿತ್​ ಸಹೋದರ ರಾಕೇಶ್​​ ಸಮುದ್ರಕ್ಕೆ ಇವರು ಬೀಳುತ್ತಿದ್ದಂತೆಯೇ ಕೂಗಲು ಆರಂಭಿಸಿದ್ದಾರೆ. ಈ ಘಟನೆಯ ಬಗ್ಗೆ ಮಾತನಾಡಿದ ರಾಕೇಶ್​, ನಾನು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದೆ. ಹಗ್ಗ ತುಂಡಾದ ತಕ್ಷಣ ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಮುಗಿಲೆತ್ತರದಿಂದ ನನ್ನ ಸಹೋದರ ಹಾಗೂ ಅತ್ತಿಗೆ ಸಮುದ್ರಕ್ಕೆ ಬಿದ್ದುದ್ದನ್ನು ಕಣ್ಣಾರೆ ಕಂಡಿದ್ದೆ. ಈ ಕ್ಷಣದಲ್ಲಿ ನನಗೆ ಅಸಹಾಯಕ ಎನಿಸಿದ ಮಟ್ಟಿಗೆ ಇನ್ಯಾವತ್ತು ಎನಿಸಿರಲಿಲ್ಲ ಎಂದು ಹೇಳಿದ್ರು. ಪ್ಯಾರಾಸೈಲಿಂಗ್​ ಸಿಬ್ಬಂದಿ ಅಜಾಗರೂಕತೆಯೇ ಇದಕ್ಕೆ ಕಾರಣ ಎಂದು ಇದೇ ವೇಳೆ ಕಿಡಿಕಾರಿದ್ರು.

ಆದರೆ ಪಾಮ್ಸ್​ ಅಡ್ವೆಂಚರ್​ ಹಾಗೂ ಮೋಟರ್ ಸ್ಪೋರ್ಟ್ಸ್​ ಮಾಲೀಕ ಈ ಘಟನೆಗೆ ಅತಿಯಾದ ಗಾಳಿಯೇ ಕಾರಣ ಎಂದು ಹೇಳಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಎಂದಿಗೂ ಇಂತಹ ಘಟನೆ ನಡೆದಿರಲಿಲ್ಲ. ಭಾನುವಾರ ಅತಿಯಾದ ಗಾಳಿ ಬೀಸುತ್ತಿತ್ತು. ಇದೇ ಕಾರಣಕ್ಕೆ ಈ ಘಟನೆ ಸಂಭವಿಸಿದೆ ಎಂದು ಮೋಹನ್​ ಲಕ್ಷ್ಮಣ ಹೇಳಿದ್ರು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...