ಸಾಕಷ್ಟು ಪ್ರಯತ್ನಗಳ ಬಳಿಕ ದೇಶದಲ್ಲಿ ಇದೀಗ ಕೊರೊನಾ 2ನೆ ಅಲೆಯ ಆರ್ಭಟ ಕಡಿಮೆಯಾಗಿದೆ. ಹೀಗಾಗಿ ದೇಶದಲ್ಲಿ ದೈನಂದಿನ ಕೇಸುಗಳ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡು ಬರ್ತಿದೆ. ಹಾಗಂತ ಸಣ್ಣ ನಿರ್ಲಕ್ಷ್ಯವೂ ಅಪಾಯಕ್ಕೆ ದೂಡಿಬಿಡಬಹುದು. ಅದರಲ್ಲೂ ಗರ್ಭಿಣಿಯರಿಗಂತೂ ಕೊರೊನಾ ಲಸಿಕೆ ಕೂಡ ಲಭ್ಯವಿಲ್ಲದೇ ಇರೋ ಕಾರಣ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಹ ಅದು ಕಡಿಮೆಯೇ.
ಕೊರೊನಾ ವೈರಸ್ ಗರ್ಭಿಣಿಯರಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಯನ್ನ ತಂದೊಡ್ಡಬಹುದು. ಗರ್ಭಾವಸ್ಥೆಯಲ್ಲಿ ಇರುವಾಗಲೇ ಶ್ವಾಸಕೋಶ, ಹೃದಯ ಎಲ್ಲವೂ ಸೂಕ್ಷ್ಮ ಸ್ಥಿತಿಯಲ್ಲಿ ಇರುತ್ತದೆ. ಇಂತಹ ಸಂದರ್ಭದಲ್ಲಿ ಕೊರೊನಾ ಕೂಡ ಬಂದು ಬಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ.
ಕೊರೊನಾದ ಅಪಾಯದಿಂದ ದೂರವಿರಬೇಕು ಅಂದರೆ ಗರ್ಭಿಣಿಯರು ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಹಾಗೂ ಜಿಂಕ್ ಅಂಶವುಳ್ಳ ಪದಾರ್ಥವನ್ನ ಸೇವನೆ ಮಾಡಬೇಕು. ಗರ್ಭಾವಸ್ಥೆಯ ಸಂದರ್ಭದಲ್ಲಿ ಮಹಿಳೆಯ ರೋಗ ನಿರೋಧಕ ಶಕ್ತಿ ಕೂಡ ಕ್ಷೀಣಿಸಿರುತ್ತೆ. ಹೀಗಾಗಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ಸಲುವಾಗಿ ಅಗಾಧ ಪ್ರಮಾಣದಲ್ಲಿ ಹಣ್ಣು ಹಾಗೂ ತರಕಾರಿಗಳ ಸೇವನೆ ಅತ್ಯಗತ್ಯ. ಮನೆಯಲ್ಲಿ ತಯಾರಿಸಿರುವ ಖಾದ್ಯವನ್ನೇ ಸೇವನೆ ಮಾಡಿ.
ಡ್ರೈ ಫ್ರೂಟ್ಸ್ ಹಾಗೂ ಬೇಯಿಸಿದ ಮೊಟ್ಟೆ ಕೂಡ ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಸೇರ್ಪಡೆಯಾಗಿರಲಿ. ವೈದ್ಯರ ಸಲಹೆ ಮೇರೆಗೆ ನಿತ್ಯ ವ್ಯಾಯಾಮ ಹಾಗೂ ಪ್ರಾಣಾಯಾಮಗಳನ್ನ ಮಾಡಲು ಮರೆಯದಿರಿ.