ಹಾಸ್ಟೆಲ್ಗಳಲ್ಲಿ ವಾಸಿಸುವ ಬಹುತೇಕ ಮಂದಿಯ ಸಮಸ್ಯೆ ಎಂದರೆ ಅಲ್ಲಿಯ ಊಟ ಚೆನ್ನಾಗಿಲ್ಲ ಎನ್ನುವುದು. ಹೆಚ್ಚು ದುಡ್ಡು ಕೊಟ್ಟು ಇದ್ದರೂ ಸರಿಯಾದ ಆಹಾರ ಸಿಗದೇ ಹಲವು ವಿದ್ಯಾರ್ಥಿಗಳು ತೊಂದರೆ ಅನುಭವಿಸುವುದು ಉಂಟು. ಇದೇ ರೀತಿ ಹಾಸ್ಟೆಲ್ ಒಂದರಲ್ಲಿ ಎಂಥ ಆಹಾರ ಸಿಗುತ್ತಿದೆ ಎಂಬ ಬಗ್ಗೆ “ಹಾಸ್ಟೆಲ್ ಕಾ ಖಾನಾ (ಹಾಸ್ಟೆಲ್‌ನ ಆಹಾರ)” ಎಂದು ಹೇಳಿಕೊಳ್ಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.
ಟ್ವಿಟರ್‌ನಲ್ಲಿ, ಸಾಕ್ಷಿ ಜೈನ್ ಎನ್ನುವವರು ಇದನ್ನು ಶೇರ್ ಮಾಡಿಕೊಂಡಿದ್ದಾರೆ. ಕಂಟೆಂಟ್ ಸ್ಟ್ರಾಟಜಿಸ್ಟ್ ಆಗಿರುವ ಸಾಕ್ಷಿ ಅವರು, ಹಾಸ್ಟೆಲ್ನಲ್ಲಿ ಇರುವ ಆಹಾರ ಹೇಗೆ ಇದೆ ಎಂಬ ಬಗ್ಗೆ ವಿಡಿಯೋದಲ್ಲಿ ತಿಳಿಸಿದ್ದಾರೆ. ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಸಿಗುವ ಪರಾಟದ ಕುರಿತು ಅವರು ವಿವರಣೆ ನೀಡಿದರು.
ವೀಡಿಯೊದಲ್ಲಿ, ಹಾಸ್ಟೆಲ್ ಆವರಣದೊಳಗೆ ಯುವತಿಯೊಬ್ಬಳು ಪರಾಟವನ್ನು ಹಿಡಿದು ಮರದ ಮೇಜಿನ ಮೇಲೆ ಕುಟ್ಟುವುದನ್ನು ನೋಡಬಹುದು. ಮೃದುವಾಗಿರಬೇಕಾದ ಪರಾಟ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಎಷ್ಟೇ ಕುಟ್ಟಿದರೂ ಅದು ಬಾಗುವುದಿಲ್ಲ, ಮುರಿಯುವುದಿಲ್ಲ. ಮೇಜಿನ ಮೇಲೆ ಬಲವಾಗಿ ಬಡಿದು ಅನೇಕ ಪ್ರಯತ್ನಗಳ ಹೊರತಾಗಿಯೂ, ಯುವತಿ ಅದನ್ನು ಮುರಿಯಲು ವಿಫಲವಾಗಿದ್ದು, ನಮ್ಮ ಹಾಸ್ಟೆಲ್‌ನ ಪರಾಟ ಹೀಗೆ ಎಂದು ಹೇಳಿದ್ದಾಳೆ.
ಈ ವಿಡಿಯೋ ಸಕತ್ ವೈರಲ್ ಆಗಿದ್ದು, ಹಲವರು ತಮ್ಮ ಹಾಸ್ಟೆಲ್ಗಳ ಬಗ್ಗೆಯೂ ಮಾಹಿತಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.