ಭೂಮಿಯ ಮೇಲೆ ಅತಿ ವೇಗವಾಗಿ ಓಡುವ ಪ್ರಾಣಿ ಯಾವುದು ಅಂದ್ರೆ ಸಾಕು, ತಕ್ಷಣವೇ ನೆನಪಾಗೋದು ಚಿರತೆ. ನೋಡೋದಕ್ಕೆ ಸೈಲೆಂಟ್ ಆಗಿದ್ರೂ, ಓಡೋ ವಿಷ್ಯ ಬಂದ್ರೆ ಸಾಕು ಚಿರತೆಗೆ ಕಾಂಪಿಟೇಶನ್ ಕೊಡುವ ಪ್ರಾಣಿ ಇನ್ನೊಂದಿಲ್ಲ. ಇದೇ ಚಿರತೆಯ ವಿಡಿಯೋ ಒಂದು ಈಗ ಸೊಶಿಯಲ್ ಮೀಡಿಯಾದಲ್ಲಿ ಸೆನ್ಸೆಶನ್ ಹುಟ್ಟಿಸಿದೆ.
ಸಣ್ಣ ತಲೆ, ತೆಳ್ಳಗಿನ ಸೊಂಟ ಮತ್ತು ಅದ್ಭುತ ಸ್ನಾಯ ಹೊಂದಿರುವ ದೇಹ ಇನ್ನೂ ಕತ್ತಲೆಯಲ್ಲೂ ದಿಟ್ಟಿಸಿ ನೋಡುವ ದೃಷ್ಟಿ ಚಿರತೆಗಳಿಗೆ ಇರುತ್ತೆ. ಇದೇ ಕಾರಣಕ್ಕೆ ಚಿರತೆ ವೇಗವಾಗಿ ಓಡಲು ಸಾಧ್ಯವಾಗುತ್ತೆ. ಅದರಲ್ಲೂ ಚಿರತೆಗಳಲ್ಲಿ ವಿಶೇಷವಾಗಿರುವ Acinonyx jubatus ಅನ್ನೂ ಚಿರತೆ, ಉಳಿದ ಚಿರತೆಗಳಿಗಿಂತಲೂ ವೇಗವಾಗಿ ಓಡಲು ಸಾಧ್ಯವಾಗಿಸುತ್ತೆ. ಇದು ಓಡುವ ವೇಗ ಏನಿಲ್ಲ ಅಂದರೂ ಗಂಟೆಗೆ 60 ಮೈಲು ಅಷ್ಟಿರುತ್ತೆ. ಅದೇ ರೀತಿಯ ವಿಡಿಯೋ ಒಂದು ಇತ್ತಿಚೆಗೆ ವೈರಲ್ ಆಗಿದೆ. ಅದರಲ್ಲೂ ಈ ವಿಡಿಯೋದಲ್ಲಿ ಚಿರತೆ ಜಿಗಿಯುವ ರೀತಿ ನೋಡಿದೆ ಎಂಥವರೂ ಕೂಡ ನಿಬ್ಬೆರಗಾಗುವ ಹಾಗಿದೆ.
ಈ ವೀಡಿಯೊ ಟ್ವಿಟರ್‌ನ ಫ್ಯಾಸಿನೇಟ್ ಅನ್ನುವ ಹೆಸರಿನ ಅಕೌಂಟ್‌ನಲ್ಲಿ ಶೇರ್ ಮಾಡಲಾಗಿದೆ. ಈ ಚಿರತೆ ಇಡುವ ಒಂದೇ ಒಂದು ಹೆಜ್ಜೆ ಏನಿಲ್ಲ ಅಂದರೂ 22 ಅಡಿಗಳಷ್ಟು ದೂರ ಇಟ್ಟಿರುತ್ತೆ. ಮತ್ತು ವೇಗ ಕಡಿಮೆ ಅಂದರೂ 70 mph ಆಗಿರುತ್ತೆ. ಈ ವಿಡಿಯೋವನ್ನ 10.7 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಇನ್ನೂ 49.SK ಜನರು ಈ ವೀಡಿಯೊವನ್ನು ಇಷ್ಟಪಟ್ಟಿದ್ದಾರ
ಈ ವಿಡಿಯೋ ನೋಡಿದ ನೆಟ್ಟಿಗರೊಬ್ಬರು, ಚಿರತೆ ಇಷ್ಟು ವೇಗವಾಗಿ ಓಡಿದರೂ ಅದಕ್ಕೆ ಸುಸ್ತೇ ಆಗಿರುವುದಿಲ್ಲ. ಬದಲಾಗಿ ಅದು ಇನ್ನಷ್ಟು ವೇಗವಾಗಿ ಓಡುವಷ್ಟು ಸಮರ್ಥ ಆಗಿರುತ್ತೆ. ಬೆಕ್ಕಿನ ರೂಪದಲ್ಲಿರುವ ಈ ಚಿರತೆಗಳು ಸಾಮಾನ್ಯ ಪ್ರಾಣಿ ಅಲ್ಲ ಅಂತ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಸೌತ್ ಆಫ್ರಿಕಾದಲ್ಲಿ ಈ ರೀತಿ ಚಿರತೆಗಳು ಓಡುವ ದೃಶ್ಯ ಸಾಮಾನ್ಯ ಎಂದು ಕಾಮೆಂಟ್ ಹಾಕಿದ್ದಾರ
https://twitter.com/fasc1nate/status/1611985795417575424?ref_src=twsrc%5Etfw%7Ctwcamp%5Etweetembed%7Ctwterm%5E1611985795417575424%7Ctwgr%5E0450ba61d506dd1d7d64b6e285af665e7c40f98f%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fvideo-cheetah-takes-huge-strides-to-reach-top-speed-internet-mesmerised-3674997