ಅಮ್ಮನಿಂದ ಮಗುವನ್ನು ಬೇರ್ಪಡಿಸಿದರೆ ಹೇಗಿರುತ್ತದೆ ? ಊಹಿಸಲೂ ಸಾಧ್ಯವಿಲ್ಲದ ಮಾತು ಅಲ್ಲವೆ, ಅದು ಮನುಷ್ಯರೇ ಆಗಬೇಕೆಂದೇನೂ ಇಲ್ಲ, ಪ್ರಾಣಿಗಳ ರೋಧನೆಯೂ ಇದಕ್ಕೆ ಹೊರತಲ್ಲ. ಅಂಥದ್ದೇ ಒಂದು ನೋವಿನ ಹಾಗೂ ಭಾವುಕರಾಗುವ ವಿಡಿಯೋ ವೈರಲ್ ಆಗಿದೆ.
ಅಸಲಿಗೆ ಚಿಂಪಾಂಜಿಯು ಮಗುವಿಗೆ ಜನ್ಮ ನೀಡಿದ ನಂತರ ಪಶುವೈದ್ಯರು ಕೆಲವು ವೈದ್ಯಕೀಯ ಚಿಕಿತ್ಸೆಗಾಗಿ ಅದನ್ನು ತೆಗೆದುಕೊಂಡು ಹೋದರು. ಆದರೆ ಅಮ್ಮ ಚಿಂಪಾಂಜಿ ತನ್ನ ಮಗು ಸತ್ತಿದೆ ಎಂದು ಊಹಿಸಿತು ಮತ್ತು ನೋವಿನಿಂದ ಎದೆಗುಂದಿತ್ತು.
ಸ್ವಲ್ಪ ಸಮಯದ ಬಳಿಕ ಮಗುವನ್ನು ಅಮ್ಮನ ಬಳಿಗೆ ಕರೆತಂದಾಗ, ಮಗುವನ್ನು ನೋಡಿ ಭಾವಪರವಶರಾಗಿದ್ದು ವಿಡಿಯೋದಲ್ಲಿ ನೋಡಬಹುದು. ಮಗುವನ್ನು ತನ್ನ ತೋಳುಗಳಲ್ಲಿ ತೆಗೆದುಕೊಂಡು ಅದನ್ನು ಅಪ್ಪಿಕೊಂಡಿತು.
ವಿಡಿಯೋವನ್ನು ಕಾನ್ಸಾಸ್‌ನ ಸೆಡ್ಗ್ವಿಕ್ ಕೌಂಟಿ ಮೃಗಾಲಯದಲ್ಲಿ ರೆಕಾರ್ಡ್ ಮಾಡಲಾಗಿದೆ. ಮರಿ ಹುಟ್ಟಿದಾಗ ಕಡಿಮೆ ಆಮ್ಲಜನಕದ ಮಟ್ಟವನ್ನು ಹೊಂದಿದ್ದರಿಂದ ಸುಮಾರು 48 ಗಂಟೆಗಳ ನಂತರ, ಮಗುವನ್ನು ಅಮ್ಮನಿಂದ ಬೇರ್ಪಡಿಸಿ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿತ್ತು. ಅಮ್ಮ ಮಗುವಿನ ಮಿಲನ ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.
https://youtu.be/IJaId4g3NMI