
ಮಂಗಳೂರು: ವಿಡಿಯೋ ಟ್ರ್ಯಾಪ್ ಮಾಡಿ ಆಟೋ ಚಾಲಕನಿಂದ ಹಣ ಸುಲಿಗೆಗೆ ತಂಡವೊಂದು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಒಂದು ಕ್ಷಣ ಮೈಮರೆತ ಆಟೋ ಚಾಲಕ ಮರ್ಯಾದೆ ಕಳೆದುಕೊಳ್ಳುವಂತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಕಡಬದ ಆಟೋ ಚಾಲಕನೊಬ್ಬನಿಗೆ ರಾತ್ರಿ ವೇಳೆ ಯುವತಿ ಬೆತ್ತಲಾಗಿ ವಿಡಿಯೋ ಕಾಲ್ ಮಾಡಿದ್ದಾಳೆ. ಇತ್ತ ಮೈಮರೆತಿದ್ದ ಆಟೋ ಚಾಲಕ ತಾನು ಕೂಡ ಉದ್ರಿಕ್ತನಾಗಿದ್ದಲ್ಲದೇ ಬಟ್ಟೆ ಬಿಚ್ಚಿ ಬೆತ್ತಲಾಗಿ ಆಕೆಯೊಂದಿಗೆ ಸರಸ, ಸಂಭಾಷಣೆ ನಡೆಸಿದ್ದಾನೆ.
ನಂತರದಲ್ಲಿ ಈತನನ್ನು ಸಂಪರ್ಕಿಸಿದ ಗ್ಯಾಂಗ್ ವೊಂದು ಬೆತ್ತಲೆ ವಿಡಿಯೋ ಬಹಿರಂಗಪಡಿಸದಿರಲು ಹಣಕ್ಕಾಗಿ ಬೇಡಿಕೆ ಇಟ್ಟಿದೆ. ಇದಕ್ಕೆ ಆಟೋ ಚಾಲಕ ತಲೆಕೆಡಿಸಿಕೊಂಡಿರಲಿಲ್ಲ. ನಂತರ ಆಟೋ ಚಾಲಕನಿಗೆ ಸಂಬಂಧಿಸಿದ ವಾಟ್ಸಾಪ್ ಗುಂಪುಗಳಿಗೆ ವಿಡಿಯೋ ಹರಿಬಿಡಲಾಗಿದ್ದು, ಆತನ ಮರ್ಯಾದೆ ಕಳೆಯಲಾಗಿದೆ ಎಂದು ಹೇಳಲಾಗಿದೆ.