
ಕಲಬುರಗಿ: ಕಲ್ಬುರ್ಗಿ ಜಿಲ್ಲೆ ಆಳಂದ ತಾಲೂಕಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗೆ ಕೊಲೆ ಮಾಡಿದ್ದ 16 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸೆಕ್ಸ್ ವಿಡಿಯೋಗೆ ದಾಸನಾಗಿದ್ದ 16 ವರ್ಷದ ಐಟಿಐ ವಿದ್ಯಾರ್ಥಿ ಇಂತಹ ಕೃತ್ಯವೆಸಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಗಳಲ್ಲಿ ಅಶ್ಲೀಲ ವಿಡಿಯೋ ಹೆಚ್ಚಾಗಿ ನೋಡುತ್ತಿದ್ದ ವಿದ್ಯಾರ್ಥಿ ಅದರಿಂದ ಪ್ರೇರಣೆಗೊಂಡು ಮಂಗಳವಾರ ಬಹಿರ್ದೆಸೆಗೆ ತೆರಳಿದ್ದ 9ನೇ ತರಗತಿ ಬಾಲಕಿಯನ್ನು ಹಿಂಬಾಲಿಸಿ ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ಎಸಗಿ ಬಳಿಕ ಹತ್ಯೆ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ.