ಬೆಂಗಳೂರು: ಸೆಕ್ಸ್ ವಿಡಿಯೋ ಇದೆ ಎಂದು ಶಿರಸ್ತೇದಾರ್ ಗೆ ಬ್ಲಾಕ್ ಮೇಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ಕೆ.ಆರ್. ಪುರಂ ಠಾಣೆ ಪೊಲೀಸರು ಗಣಪತಿ ನಾಯಕ್, ಕಿಶನ್, ಕೇಶವನ್ ಎಂಬುವರನ್ನು ಬಂಧಿಸಿದ್ದಾರೆ. ವಕೀಲ ಜಗದೀಶ್ ಕಚೇರಿಯಲ್ಲಿ ಗಣಪತಿ ಕೆಲಸ ಮಾಡುತ್ತಿದ್ದ. ಕೋಲಾರದಲ್ಲಿ ಕೆಲಸ ಮಾಡುತ್ತಿದ್ದ ಶಿರಸ್ತೆದಾರ್ ಗೆ ಬ್ಲಾಕ್ಮೇಲ್ ಮಾಡಲಾಗಿದೆ.
ಪರಿಚಿತರಾಗಿದ್ದ ಯುವತಿಯೊಂದಿಗೆ ಶಿರಸ್ತೆದಾರ್ ಅಕ್ರಮ ಸಂಬಂಧ ಬೆಳೆಸಿದ್ದು, ಇಬ್ಬರ ಸೆಕ್ಸ್ ವೀಡಿಯೊಗಳನ್ನು ಯುವತಿ ರೆಕಾರ್ಡ್ ಮಾಡಿದ್ದಳು. ನಂತರ ಸೆಕ್ಸ್ ವೀಡಿಯೊಗಳನ್ನು ಕಿಶನ್ ಗೆ ನೀಡಿದ್ದಳು. ಸೆಕ್ಸ್ ದೃಶ್ಯ ಶಿರಸ್ತೆದಾರ್ ಗೆ ವಾಟ್ಸಾಪ್ ಮಾಡಿ 25 ಲಕ್ಷ ರುಪಾಯಿ ಕೊಡುವಂತೆ ಆರೋಪಿಗಳು ಡಿಮ್ಯಾಂಡ್ ಮಾಡಿದ್ದರು.
ಇಲ್ಲದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಡುವುದಾಗಿ ಬೆದರಿಸಿದ್ದರು. ಶಿರಸ್ತೆದಾರ್ ನೀಡಿದ ದೂರು ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸೆಕ್ಸ್ ವಿಡಿಯೋದಲ್ಲಿರುವ ಯುವತಿಗಾಗಿ ಶೋಧ ಕೈಗೊಳ್ಳಲಾಗಿದೆ. ಕೆಆರ್ ಪುರಂ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.