
ಬೆಂಗಳೂರು: ಯುವತಿಯರು ಸ್ನಾನ ಮಾಡುತ್ತಿದ್ದ ವಿಡಿಯೋ ತೆಗೆಯುತ್ತಿದ್ದ ಕಾಮುಕನನ್ನು ಬಂಧಿಸಲಾಗಿದೆ. ವಿಡಿಯೋ ತೆಗೆಯುವಾಗಲೇ ಸಿಕ್ಕಿಬಿದ್ದ ಆರೋಪಿಯನ್ನು ಹಿಡಿದ ಸ್ಥಳೀಯರು ಮಹದೇವಪುರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಚಿಕ್ಕಬಳ್ಳಾಪುರ ಮೂಲದ ಅಶೋಕ್ ಬಂಧಿತ ಯುವಕ. ಮಹದೇವಪುರ ಹೂಡಿಯ ಪಿಜಿಯಲ್ಲಿ ವಾಸವಾಗಿದ್ದ ಅಶೋಕ್ ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಅಶೋಕ ವಾಸವಾಗಿದ್ದ. ಪಿಜಿ ಎದುರಲ್ಲೇ ಲೇಡಿಸ್ ಪಿಜಿ ಇದ್ದು, ಕಿಟಕಿಗಳ ಮೂಲಕ ವಿಡಿಯೋ ಮಾಡುವಾಗ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಶೋಕನ ಬಳಿ 7 ಯುವತಿಯರ ಸ್ನಾನದ ವಿಡಿಯೋ ಪತ್ತೆಯಾಗಿದೆ. ಆರೋಪಿಯನ್ನು ಮಹದೇವಪುರ ಠಾಣೆ ಪೋಲಿಸರು ಬಂಧಿಸಿದ್ದಾರೆ.