ದತ್ತಿ ಇಲಾಖೆ ಮಹಿಳಾ ಸಿಬ್ಬಂದಿಯೊಬ್ಬರು ತಮ್ಮ ಹಿರಿಯ ಅಧಿಕಾರಿಯ ಕಚೇರಿಗೆ ನುಗ್ಗಿ ಅವರ ಮುಖಕ್ಕೆ ಮರಳನ್ನು ಎಸೆದ ನಾಟಕೀಯ ಘಟನೆಯೊಂದು ಆಂಧ್ರಪ್ರದೇಶಧ ವಿಶಾಖಪಟ್ಟಣದಲ್ಲಿ ನಡೆದಿದೆ.
ಹಿರಿಯ ಅಧಿಕಾರಿ ತಮಗೆ ಕೆಲಸದ ವಿಚಾರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಮಹಿಳಾ ಸಿಬ್ಬಂದಿ ಆರೋಪಿಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ದತ್ತಿ ಇಲಾಖೆ ಸಹಾಯಕ ಆಯುಕ್ತೆ ಕೆ. ಸಂತಿ ಎಂಬವರು ಏಕಾಏಕಿ ಉಪ ಆಯುಕ್ತ ಪುಷ್ಪವರ್ದನ್ ಮುಖಕ್ಕೆ ಮರಳು ಚೆಲ್ಲಿದ್ದಾರೆ. ಕಳೆದ ಕೆಲ ವಾರಗಳಿಂದ ಈ ಪುಷ್ಪವರ್ದನ್ ತಮಗೆ ಹಾಗೂ ಇತರೆ ಸಹೋದ್ಯೋಗಿಗಳಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಸಂತಿ ಆರೋಪಿಸಿದ್ದಾರೆ. ಆದರೆ ಈ ಎಲ್ಲಾ ಆರೋಪಗಳನ್ನು ಪುಷ್ಪವರ್ದನ್ ತಳ್ಳಿ ಹಾಕಿದ್ದಾರೆ.
ಸಚಿವರ ಸಭೆಗೆ ಹೋಗುತ್ತಿದ್ದಾಗ ಕಂದಕಕ್ಕೆ ಉರುಳಿದ ಕಾರು; PWD ಎಇಇ ದುರ್ಮರಣ
ಸಹಾಯಕ ಆಯುಕ್ತೆ ಸಂತಿ ಪುಷ್ಪವರ್ದನ್ ವಿರುದ್ಧ ಮಾನಸಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಕಚೇರಿಯಲ್ಲಾದ ತಪ್ಪುಗಳನ್ನು ನೇರವಾಗಿ ಹೇಳುವ ಬದಲು ತಮ್ಮ ವಿರುದ್ಧ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿ ತನಿಖೆಗೆ ಕರೆದಿದ್ದಾರೆ. ನಾವು ಎಲ್ಲಿಯಾದರೂ ಇನ್ಸ್ಪೆಕ್ಷನ್ಗೆ ತೆರಳಿದ್ರೆ ಅಲ್ಲಿಗೆ ಸಂಬಂಧಿಸಿದ ಲೇಖನಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸಿದ್ದಾರೆ.
https://youtu.be/x-q8WwN3ZBQ?t=51