ಉತ್ತರ ಪ್ರದೇಶದ ಅಲಿಘರ್‌ನ ಸ್ವತಂತ್ರ ಅಭ್ಯರ್ಥಿ ಪಂಡಿತ್ ಕೇಶವ್ ದೇವ್ ಅವರಿಗೆ ಚುನಾವಣಾ ಆಯೋಗ ಚಪ್ಪಲಿ ಗುರುತು ನೀಡಿದೆ.
ತನಗೆ ನೀಡಿದ ಚುನಾವಣಾ ಚಿಹ್ನೆ ಚಪ್ಪಲಿಯನ್ನೇ ಹಾರ ಮಾಡಿಕೊಂಡು ಕೇಶವ್ ಪ್ರಚಾರ ಕೈಗೊಂಡಿದ್ದಾರೆ.
ಚುನಾವಣಾ ಆಯೋಗ ಚಪ್ಪಲಿ ಗುರುತು ನೀಡಿದ ಹಿನ್ನಲೆಯಲ್ಲಿ ಅದನ್ನೇ ಪ್ಲಸ್ ಪಾಯಿಂಟ್ ಮಾಡಿಕೊಂಡ ಅವರು ಚಪ್ಪಲಿಗಳಿಂದ ಮಾಡಿದ ಹಾರ ಹಾಕಿಕೊಂಡು ಮತದಾರರನ್ನು ಸೆಳೆಯುತ್ತಿದ್ದಾರೆ. ತಮಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ಜನರನ್ನು ಸೆಳೆಯುವ ಗುರಿಯನ್ನು ಹೊಂದಿರುವ ದೇವ್ ಅವರು ತಮ್ಮ ಪ್ರಚಾರದ ಸಮಯದಲ್ಲಿ ತಮ್ಮ ಕುತ್ತಿಗೆಗೆ 7 ಚಪ್ಪಲಿಗಳ ಹಾರವನ್ನು ಹಾಕಿಕೊಂಡಿರುತ್ತಾರೆ.
ಅಲಿಗಢ ಎರಡನೇ ಹಂತದಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಮತಗಳ ಎಣಿಕೆ ಜೂನ್ 4 ರಂದು ನಡೆಯಲಿದೆ.
2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ಕುಮಾರ್ ಗೌತಮ್ ಅವರು ಅಲಿಗಢದಿಂದ 656215 ಮತಗಳನ್ನು ಗಳಿಸಿದರು. 426954 ಮತಗಳನ್ನು ಪಡೆದ ಬಿಎಸ್ಪಿ ಡಾ.ಅಜೀತ್ ಬಲಿಯಾನ್ ಅವರನ್ನು ಬಿಜೆಪಿ ಸೋಲಿಸಿತು.