![](https://kannadadunia.com/wp-content/uploads/2023/06/456828-2-1024x577.png)
ವಿಡಿಯೋದಲ್ಲಿ ಮಹಿಳೆಯೊಬ್ಬಳು ಅಳುತ್ತಿರುವುದನ್ನು ಕಾಣಬಹುದು, ಸಹಾಯಕ್ಕಾಗಿ ಹತಾಶೆಯಿಂದ ಕೂಗುತ್ತಿರುವುದನ್ನು ಕಾಣಬಹುದು. ಎಎಪಿ ನಾಯಕ ನರೇಶ್ ಬಲ್ಯಾನ್ ಈ ಘಟನೆಯನ್ನು ಬೆಳಕಿಗೆ ತಂದಿದ್ದು, ಅವರು ಅದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
23 ವರ್ಷದ ಯುವತಿಯನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸಿದ್ದ ವಿಡಿಯೋ ವೈರಲ್ (The video viral) ಆಗಿದೆ. ಅಪಹರಣಕಾರ ಮಹಿಳೆಯನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಅಗ್ನಿಯನ್ನು ಸುತ್ತಿ ಬಲವಂತವಾಗಿ ಮದುವೆಯಾಗಿದ್ದಾನೆ. ಆಕೆ ಸಹಾಯಕ್ಕಾಗಿ ಅಂಗಲಾಚಿದರೂ ಯಾರೂ ಕೂಡ ಯುವತಿಯ ರಕ್ಷಣೆಗೆ ಬರುವುದಿಲ್ಲ.
ಈ ಬಗ್ಗೆ ಬಿಜೆಪಿಯ ರಾಷ್ಟ್ರೀಯ ವಕ್ತಾರ ಮತ್ತು ಜೈಪುರ ಗ್ರಾಮೀಣ ಸಂಸದ ಕರ್ನಲ್ ರಾಜ್ಯವರ್ಧನ್ ರಾಥೋಡ್ ಕೂಡ ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಕುಖ್ಯಾತ ಕಾಂಗ್ರೆಸ್ ದುರಾಡಳಿತದಲ್ಲಿ ಜಂಗಲ್ ರಾಜ್ ಮೇಲುಗೈ ಸಾಧಿಸಿದೆ! ಜೈಸಲ್ಮೇರ್ನಲ್ಲಿ, ಹುಡುಗಿಯನ್ನು ಬಹಿರಂಗವಾಗಿ ಅಪಹರಿಸಿ ಬಂಜರು ಮರುಭೂಮಿಯಲ್ಲಿ ಮದುವೆಯಾಗಲು ಒತ್ತಾಯಿಸಲಾಗುತ್ತದೆ. ಇದೆಲ್ಲವನ್ನೂ ಯಾವಾಗ ನಿಯಂತ್ರಿಸಲಾಗುತ್ತದೆ? ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಭಯದ ನೆರಳಿನಲ್ಲಿ ಎಷ್ಟು ದಿನ ಬದುಕುತ್ತಾರೆ? ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ( Head of Women’s Commission) ಸ್ವಾತಿ ಮಲಿವಾಲ್, ‘ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಟ್ಯಾಗ್ ಮಾಡಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದು ತುಂಬಾ ಆಘಾತಕಾರಿ ಮತ್ತು ಭಯಾನಕ ಘಟನೆಯಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ’ ಎಂದು ಆಗ್ರಹಿಸಿದ್ದಾರೆ.