ಮಲಗಿದಾಗಲೆಲ್ಲ ಕೆಲವು ಚಿತ್ರ ವಿಚಿತ್ರ ರೀತಿಯ ಕನಸುಗಳು ಬೀಳುತ್ತವೆ. ಆದರೆ ಅದನ್ನು ನಂಬಲು ಅಸಾಧ್ಯ, ಆದರೆ ಮಹಿಳೆಯೊಬ್ಬರಿಗೆ ಕಲ್ಪನೆಗೂ ಮೀರಿದ ಭಯಾನಕ ಘಟನೆ ಸಂಭವಿಸಿದೆ.
ರಷ್ಯಾದ ಮಹಿಳೆಯೊಬ್ಬರ ಬಾಯಿಯೊಳಗೆ 4 ಅಡಿ ಉದ್ದದ ಹಾವು ಪ್ರವೇಶಿಸಿದ್ದು, ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಹೊರತೆಗೆದ ಭಯಾನಕ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಿಳೆ ರಾತ್ರಿ ಮಲಗಿದ್ದಾಗ ಹಾವೊಂದು ಆಕೆಯ ಬಾಯಿ ಮೂಲಕ ನುಗ್ಗಿ ಗಂಟಲಿಗೆ ಇಳಿದಿದೆ.
ಆಪರೇಷನ್ ಥಿಯೇಟರ್ನಲ್ಲಿ ಮಹಿಳೆ ಮಲಗಿದ್ದು ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಹಾವನ್ನು ಹೊರತೆಗೆಯಲು ಪ್ರಯತ್ನಿಸಿದಾಗ ವೀಡಿಯೊ ಪ್ರಾರಂಭವಾಗುತ್ತದೆ.
ಮಹಿಳಾ ವೈದ್ಯೆಯೊಬ್ಬರು ರೋಗಿಯ ಬಾಯಿಯಲ್ಲಿ ಶಸ್ತ್ರಚಿಕಿತ್ಸಾ ಉಪಕರಣ ಬಳಸಿ ಹಾವನ್ನು ಹೊರತೆಗೆದಿದ್ದು, ಹಾವು ಹೊರತೆಗೆದ ಕೂಡಲೇ ವೈದ್ಯರ ಮೇಲೆ ದಾಳಿ ಮಾಡಿದೆ. ಆದರೆ, ವೈದ್ಯರು ಹಾವಿನ ದಾಳಿಗೆ ಸಿಲುಕಿಲ್ಲ. ಈ 11 ಸೆಕೆಂಡ್ಗಳ ದೃಶ್ಯಾವಳಿಯಲ್ಲಿ, ಪ್ರಜ್ಞಾಹೀನ ಮಹಿಳೆಯ ಬಾಯಿಯಿಂದ ವೈದ್ಯರು ಹಾವನ್ನು ಹೊರತೆಗೆಯುವುದನ್ನು ತೋರಿಸಲಾಗಿದೆ.
ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ನಲ್ಲಿ ವೀಡಿಯೊ 1.6 ಮಿಲಿಯನ್ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ.