ಸಾಕುನಾಯಿ ಹಾಗೂ ಪುಟಾಣಿ ಬಾಲೆಯೊಬ್ಬಳ ಮುಗ್ಧ ಸ್ನೇಹದ ವಿಡಿಯೋವೊಂದು ನೆಟ್ಟಿಗರ ಮನಸೂರೆಗೊಂಡಿದೆ.
ಮನೆಯ ಕಾಂಪೌಂಡ್ ಒಳಗೆ ಇರುವ ಸಾಕು ನಾಯಿಯೊಂದಿಗೆ ಬಾಲಕಿ ಚೆಂಡಿನಾಟ ಆಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಬಾಲಕಿ ಹಾಗು ನಾಯಿ ಇಬ್ಬರೂ ಚೆಂಡನ್ನ ಪರಸ್ಪರರತ್ತ ಎಸೆದುಕೊಂಡು ಆಟವಾಡುವುದನ್ನು ನೋಡಿ ನಾವೂ ಹಾಗೇ ಮಕ್ಕಳಾಗಿಬಿಡುತ್ತೇವೇನೋ ಅನಿಸುತ್ತದೆ.
ಇಸ್ಟ್ರಾಗ್ರಾಂನಲ್ಲಿ ’ದಿಬಾಕ್ಸರ್‌ಟಫ್ಫಿ’ ಹೆಸರಿನ ಪೇಜ್ ಒಂದು ಈ ವಿಡಿಯೋ ಶೇರ್ ಮಾಡಿಕೊಂಡಿದೆ.