ಸಮುದ್ರದಲ್ಲಿ ಮುಳುಗುತ್ತಿದ್ದ ಮಹಿಳೆಯೊಬ್ಬರನ್ನ ಮುಂಬೈ ಪೊಲೀಸರು ರಕ್ಷಿಸಿದ್ದಾರೆ. ಭಾನುವಾರ ಈ ಘಟನೆ ನಡೆದಿದೆ. ಮುಂಬೈನ ಗೇಟ್ವೇ ಆಫ್ ಇಂಡಿಯಾ ಬಳಿ ಪ್ರವಾಸಿಗ ಮಹಿಳೆ ದೋಣಿ ವಿಹಾರ ಮಾಡುತ್ತಿದ್ದಾಗ ಸಮುದ್ರಕ್ಕೆ ಬಿದ್ದಿದ್ದಾರೆ. ತಕ್ಷಣವೇ ಅಲರ್ಟ್ ಆದ ಕರಾವಳಿ ಪೊಲೀಸ್ ಮತ್ತು ಕೊಲಾಬಾ ಪೊಲೀಸರ ತಂಡ ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ.
ಮಹಿಳೆ ಸಮುದ್ರದಲ್ಲಿ ದೋಣಿ ವಿಹಾರ ನಡೆಸುತ್ತಿದ್ದರು. ಬಲವಾದ ಸಮುದ್ರದ ಅಲೆ ಅವರ ದೋಣಿಗೆ ಬಡಿದ ನಂತರ, ಮಹಿಳೆ ಸಮತೋಲನ ಕಳೆದುಕೊಂಡು ಸಮುದ್ರಕ್ಕೆ ಬಿದ್ದರು ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯಚರಣೆಯ ವಿಡಿಯೋ ಚಿತ್ರಿಸಲಾಗಿದ್ದು, ಆನ್ಲೈನ್ ನಲ್ಲಿ ಈ ವಿಡಿಯೋವನ್ನ ಅಪ್ಲೋಡ್ ಮಾಡಲಾಗಿದೆ. ರಕ್ಷಣಾ ತಂಡ ಹಾಗೂ ಪೊಲೀಸರ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.