ಮುಂಬೈ: ಮಹಾರಾಷ್ಟ್ರ ಬಂಡಾಯ ಶಾಸಕರ ಅನರ್ಹತೆ ಬಗ್ಗೆ ಕ್ರಮ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ತಡೆ ನೀಡಿ ವಿಚಾರಣೆಯನ್ನು ಜು. 11 ಕ್ಕೆ ಮುಂದೂಡಿದೆ.
ಈ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಬಂಡಾಯ ನಾಯಕ ಏಕನಾಥ್ ಶಿಂಧೆ, ನಿಜವಾದ ಶಿವ ಸೈನಿಕರಿಗೆ ಜಯ ಸಿಕ್ಕಿದೆ. ಬಾಳಾ ಸಾಹೇಬರ ಹಿಂದುತ್ವಕ್ಕೆ ಜಯ ದೊರೆತಿದೆ ಎಂದು ಸುಪ್ರೀಂ ಆದೇಶದ ನಂತರ ಹೇಳಿದ್ದಾರೆ.
ಶಿವಸೇನೆಯ ಬಂಡಾಯ ಶಾಸಕರ ವಿರುದ್ಧದ ಅನರ್ಹತೆಯ ಪ್ರಕ್ರಿಯೆಗಳನ್ನು ಜುಲೈ 11 ಕ್ಕೆ ಸುಪ್ರೀಂ ಕೋರ್ಟ್ ಮುಂದೂಡಿದೆ. ನ್ಯಾಯಾಲಯದ ಆದೇಶದ ನಂತರ, ಏಕನಾಥ್ ಶಿಂಧೆ ಇದು ಬಾಳಾಸಾಹೇಬ್ ಅವರ ಸಿದ್ಧಾಂತದ ವಿಜಯವಾಗಿದೆ ಎಂದು ಹೇಳಿದ್ದಾರೆ.
ಇದು ಬಾಳಾಸಾಹೇಬ್ ಠಾಕ್ರೆಯವರ ಹಿಂದುತ್ವ ಮತ್ತು ಆನಂದ್ ದಿಘೆಯವರ ವಿಚಾರಗಳ ಗೆಲುವು ಎಂದು ಏಕನಾಥ್ ಶಿಂಧೆ ಟ್ವೀಟ್ ಮಾಡಿದ್ದಾರೆ.