ಶುಕ್ರವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಸೂದ್ ಪೆಜೆಶ್ಕಿಯಾನ್ ಜಯಗಳಿಸಿ ಇರಾನ್ 9 ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಇಸ್ಲಾಮಿಕ್ ರಿಪಬ್ಲಿಕ್ ನ್ಯೂಸ್ ಏಜೆನ್ಸಿ (ಐಆರ್ಎನ್ಎ) ಶನಿವಾರ ವರದಿ ಮಾಡಿದೆ.
ಒಟ್ಟು 30,530,157 ಮತಗಳಲ್ಲಿ, ಪೆಜೆಶ್ಕಿಯಾನ್ 16,384,403 ಮತಗಳನ್ನು ಗೆದ್ದರೆ, ಸಯೀದ್ ಜಲೀಲಿ 13,538,179 ಮತಗಳೊಂದಿಗೆ ತಮ್ಮ ಪ್ರತಿಸ್ಪರ್ಧಿಗಿಂತ ಹಿಂದೆ ನಿಂತರು.
69 ವರ್ಷದ ಪೆಜೆಶ್ಕಿಯಾನ್ ಅವರು ಇರಾನ್ ಸಂಸತ್ತಿನಲ್ಲಿ ಐದು ನಾಲ್ಕು ವರ್ಷಗಳ ಅವಧಿಗೆ ಸಂಸದರಾಗಿ ಸೇವೆ ಸಲ್ಲಿಸಿದ್ದರು.ಅವರು ಇರಾನ್ ನ 10 ನೇ ಸಂಸತ್ತಿನ ಉಪಾಧ್ಯಕ್ಷರಾಗಿದ್ದರು. ಆಗಿನ ಅಧ್ಯಕ್ಷ ಮೊಹಮ್ಮದ್ ಖತಾಮಿ ಅವರ ಆಡಳಿತದಲ್ಲಿ ನಾಲ್ಕು ವರ್ಷಗಳ ಕಾಲ ಇರಾನ್ನ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇರಾನ್ ನಾದ್ಯಂತ ಜೂನ್ 28 ರಂದು ನಾಲ್ಕು ಅಭ್ಯರ್ಥಿಗಳ ಭಾಗವಹಿಸುವಿಕೆಯೊಂದಿಗೆ ಆರಂಭಿಕ ಚುನಾವಣೆ ನಡೆಯಿತು.