
ಡೆವಿಲ್ಸ್ ಪೂಲ್ ಅಂಚಿನಲ್ಲಿ ಮಹಿಳೆಯೊಬ್ಬರು ಈಜುತ್ತಿರುವುದನ್ನು ತೋರಿಸುವ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಡೆವಿಲ್ಸ್ ಪೂಲ್ ವಿಕ್ಟೋರಿಯಾ ಫಾಲ್ಸ್‌ನ ಜಾಂಬಿಯನ್ ಬದಿಯಲ್ಲಿದೆ ಮತ್ತು ಇದು ಲಿವಿಂಗ್‌ಸ್ಟೋನ್ ದ್ವೀಪಕ್ಕೆ ಸಮೀಪದಲ್ಲಿ ಮೈಲಿ ಅಗಲದ ಜಲಪಾತದ ಮಧ್ಯದಲ್ಲಿದೆ.
ಇದು ವೈರಲ್ ಆಗಲು ಕಾರಣ, ಇದು ಹೆಸರಿಗೆ ತಕ್ಕಂತೆ ಭಯಾನಕ ಸರೋವರ. ಮಹಿಳೆಯ ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದಂತೆಯೇ ಜನರು ಭಯಗೊಂಡಿದ್ದಾರೆ. ಅದೇ ಇನ್ನೊಂದೆಡೆ ಸ್ವಿಮ್ಮಿಂಗ್ ಪ್ರಿಯರು ಸ್ಥಳದತ್ತ ಧಾವಿಸುತ್ತಿದ್ದಾರೆ.
ಇಲ್ಲಿ ಈಜುವುದು ಎಷ್ಟು ಅಪಾಯವೇ, ಅದರ ಶೂಟಿಂಗ್ ಮಾಡುವುದು ಕೂಡ ಅಪಾಯಕಾರಿಯೇ. ಇವರಿಬ್ಬರಿಗೂ ನೆಟ್ಟಿಗರು ಹ್ಯಾಟ್ಸ್‌ಆಫ್ ಎನ್ನುತ್ತಿದ್ದಾರೆ. ಆದಾಗ್ಯೂ, ಸ್ಟಂಟ್ ಮಾರಣಾಂತಿಕವಾಗಿದೆ ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ.
https://twitter.com/weirdterrifying/status/1608789387890003968?ref_src=twsrc%5Etfw%7Ctwcamp%5Etweetembed%7Ctwterm%5E1608789387890003968%7Ctwgr%5E3a0eebf1ffd8cbf70ba2f71278e122751ff32d4d%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fvictoria-falls-chilling-videos-showing-tourists-pose-at-devils-pool-go-viral-for-the-risk-factor-watch