ಮದುವೆಗೆ ನಿರಾಕರಣೆ ಮಾಡಿದ ಕಾರಣ ಆಸಿಡ್ ದಾಳಿಗೆ ತುತ್ತಾದ ಯುವತಿಗೆ ಪ್ಲಾಸ್ಟಿಕ್ ಸರ್ಜರಿ ನಡೆಸಿ, ಆಕೆಗೆ ಜೋವನೋತ್ಸಾಹ ತುಂಬುವ ಪ್ರಯತ್ನ ಬೆಂಗಳೂರಿನ ಆಸ್ಪತ್ರೆಯಲ್ಲಿ ನಡೆದಿದೆ.
ಮೊದಲ ಸುತ್ತಿನ ಶಸ್ತ್ರಚಿಕಿತ್ಸೆ ಮಾಡಿದ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯು ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಸ್ಕಿನ್ ಬ್ಯಾಂಕ್‌ನಿಂದ ಆಸಿಡ್ ದಾಳಿಗೆ ಒಳಗಾದಾಕೆಗೆ ಕಸಿ ಮಾಡಲು ಚರ್ಮದಾನ ಪಡೆದುಕೊಂಡಿತು.
ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಸಂತ್ರಸ್ತೆಯ ಮೇಲೆ ಆಕೆಯನ್ನು ಪ್ರೀತಿಸುತ್ತಿದ್ದಾತನಿಂದ ಆಸಿಡ್ ದಾಳಿ ನಡೆದಿತ್ತು, ದುಷರ್ಮಿಯು ಆಕೆಯ ಮುಖದ ಮೇಲೆ ಆಸಿಡ್ ಸುರಿದು ಅಲ್ಲಿಂದ ಪರಾರಿಯಾಗಿದ್ದಾನೆ.
ಕಾರಿನ ಬಾಗಿಲು ಏಕಾಏಕಿ ತೆರೆದ ವೇಳೆ ದ್ವಿಚಕ್ರ ವಾಹನಕ್ಕೆ ಬಡಿದು ಅಪಘಾತವಾದರೆ ಯಾರು ಹೊಣೆ ?
ಶೇ.30ರಷ್ಟು ಸುಟ್ಟಗಾಯಗಳೊಂದಿಗೆ ಆಕೆ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ಕೆ.ಟಿ.ರಮೇಶ್ ಸ್ಕಿನ್ ಬ್ಯಾಂಕ್‌ನಿಂದ ಚರ್ಮ ಕಸಿ ಮಾಡಲು ನೆರವು ನೀಡುವ ಸಂಗತಿಯನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸೇಂಟ್ ಜಾನ್ಸ್ ಆಸ್ಪತ್ರೆಯವರು ಕೇಳಿದಂತೆ ನಾವು ಕಸಿ ಮಾಡಲು 4000 ಸಿಎಂ2 ಚರ್ಮವನ್ನು ನೀಡಿದ್ದೇವೆ. ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕರ ತಂಡ ಚರ್ಮದ ಒಂದು ಭಾಗ ಬಳಸಿಕೊಂಡು ಮೊದಲ ಸುತ್ತಿನ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಿದೆ.
ಮೊದಲ ಹಂತದ ಶಸ್ತ್ರ ಚಿಕಿತ್ಸೆಯಲ್ಲಿ ಸುಟ್ಟ ಚರ್ಮದ ಕೆಲ ಭಾಗ ಮುಚ್ಚಲಾಗಿದೆ. ಮೂರು ದಿನಗಳಲ್ಲಿ 2 ನೇ ಶಸ್ತ್ರಚಿಕಿತ್ಸೆ ಮುಂದಿನ ಶಸ್ತ್ರಚಿಕಿತ್ಸೆ ನಡೆಯಲಿದೆ.