ಕೊರೊನಾ ಶುರುವಾದಾಗಿನಿಂದಲೂ ವರ್ಕ್ ಫ್ರಮ್ ಹೋಮ್ ಜಾರಿಗೆ ಬಂದಿದೆ. ಮಕ್ಕಳ ಶಾಲೆಯಿಂದ ಹಿಡಿದು ಕಚೇರಿ ಕೆಲಸಗಳು ಆನ್ಲೈನ್ ನಲ್ಲಿ ನಡೆಯುತ್ತಿವೆ. ವೀಡಿಯೊ ಕಾನ್ಫರೆನ್ಸ್ ಮೂಲಕ ಮೀಟಿಂಗ್ ಮಾಡಲಾಗ್ತಿದೆ. ಅನೇಕರು ವಿಡಿಯೋ ಕಾನ್ಫರೆನ್ಸ್ ವೇಳೆ ಸಾಕಷ್ಟು ಮುಜುಗರ ಎದುರಿಸಿದ್ದಾರೆ.
ಇಂಗ್ಲೆಂಡ್ನ 32 ವರ್ಷದ ಮಹಿಳೆ ಕೂಡ ವಿಡಿಯೋ ಕಾನ್ಫರೆನ್ಸ್ ವೇಳೆ ಮುಜುಗರಕ್ಕೊಳಗಾಗಿದ್ದಾಳೆ. ಈ ವಿಷ್ಯವನ್ನು ನಿಕಿ ಫಾಕ್ನರೇ ಹೇಳಿಕೊಂಡಿದ್ದಾಳೆ. ನಿಕಿ, ಕಂಪನಿಯೊಂದರಲ್ಲಿ ಮಾನವ ಸಂಪನ್ಮೂಲ ವ್ಯವಸ್ಥಾಪಕರಾಗಿದ್ದಾರೆ. ನಿಕಿ, ತನ್ನ ಬಾಸ್ ಮತ್ತು ಇತರ ಉದ್ಯೋಗಿಗಳೊಂದಿಗೆ ಜೂಮ್ ಮೀಟಿಂಗ್ನಲ್ಲಿದ್ದಾಗ ಅವಳ ಗಮನ ಇದ್ದಕ್ಕಿದ್ದಂತೆ ಅವಳ ಹಿಂದೆ ಕಾಣಿಸ್ತಿದ್ದ ದೃಶ್ಯದ ಮೇಲೆ ಹೋಗಿದೆ. ನಿಕಿ ಅದನ್ನು ನೋಡಿ ನಾಚಿ ಕೆಂಪಾಗಿದ್ದಾಳೆ. ಇದಕ್ಕೆ ಕಾರಣವೇನು ಎಂಬುದನ್ನು ನಿಕಿ ಹೇಳಿದ್ದಾಳೆ.
ನಿಕಿ, ಡ್ಯೂರೆಕ್ಸ್ ಮಸಾಜ್ ಲ್ಯೂಬ್ ಬಾಟಲಿ ಹಿಂದಿರುವುದನ್ನು ನೋಡಿದ್ದಾಳೆ. ಸಾಮಾನ್ಯವಾಗಿ ಈ ಜೆಲ್ಗಳನ್ನು ಲೈಂಗಿಕ ಸಂಬಂಧಗಳ ಸಮಯದಲ್ಲಿ ದಂಪತಿ ಬಳಸುತ್ತಾರೆ. ಮೀಟಿಂಗ್ ವೇಳೆ ನಿಕಿಯ ಗಮನ ಮಸಾಜ್ ಬಾಟಲಿಯತ್ತ ಹೋಗಿದೆ. ಆದ್ರೆ ಅದನ್ನು ನಾನು ತೆಗೆಯಲಿಲ್ಲ. ಒಂದು ವೇಳೆ ತೆಗೆದಿದ್ದರೆ ನನ್ನ ಬಾಸ್ ಅದನ್ನು ಗಮನಿಸುತ್ತಿದ್ದರು. ಆಗ ಮತ್ತಷ್ಟು ಮುಜುಗರವಾಗ್ತಿತ್ತು ಎಂದು ನಿಕಿ ಹೇಳಿದ್ದಾಳೆ.