
ಮಂಗಳೂರು: ಜೆರೋಸಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳ ಎದುರು ವಿಶ್ವ ಹಿಂದೂ ಪರಿಷತ್ ಹಮ್ಮಿಕೊಂಡಿದ್ದ ಧರಣಿಯನ್ನು ವಾಪಾಸ್ ಪಡೆಯಲಾಗಿದೆ.
ಶಿಕ್ಷಕಿಯಿಂದ ಧರ್ಮದ ಅವಹೇಳನ ಆರೋಪ ವಿಚಾರವಾಗಿ ಶಿಕ್ಷಕಿ ವಿರುದ್ಧ ಪ್ರತಿಭಟನೆ ನಡೆಸಿದ್ದವರ ಮೇಲೆ ಎಫ್ ಐ ಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗಳ ಎದುರು ವಿಹೆಚ್ ಪಿ ಧರಣಿ ನಡೆಸುವುದಾಗಿ ಹೇಳಿತ್ತು. ಐದು ಪೊಲೀಸ್ ಠಾಣೆಗಳ ಎದುರು ಧರಣಿ ನಡೆಸಲು ಮುಂದಾಗಿತ್ತು. ಆದರೆ ಇದೀಗ ಪೊಲೀಸ್ ಠಾಣೆಗಳ ಎದುರು ಧರಣಿ ನಿರ್ಧರ ಕೈಬಿಟ್ಟಿದೆ.
ಮಂಗಳೂರಿನ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿ ಬಳಿಕ ನಗರ ಪೊಲೀಸ್ ಕಮಿಷ್ನರ್ ಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ವಿಹೆಚ್ ಪಿ ತಿಳಿಸಿದೆ.