![](https://kannadadunia.com/wp-content/uploads/2025/01/8690abf3-a4eb-4306-95d8-d5d171325f45.jpeg)
ಗಿರಿಜಾ ಲೋಕೇಶ್ 1973ರಲ್ಲಿ ತೆರೆಕಂಡ ‘ಅಬಚೂರಿನ ಪೋಸ್ಟ್ ಆಫೀಸು’ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ಬಳಿಕ ‘ಕಾಕನ ಕೋಟೆ’ ‘ಸಿಂಹಾಸನ’, ‘ನಂಜುಂಡಿ ಕಲ್ಯಾಣ’ ‘ಚಾಲೆಂಜ್ ಗೋಪಾಲಕೃಷ್ಣ’ ‘ರಾಮಾಚಾರಿ’ ‘ಹಳ್ಳಿ ಮೇಷ್ಟ್ರು’ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡರು.
ಕಿರುತೆರೆಯಲ್ಲೂ ಸಕ್ರಿಯವಾಗಿರುವ ಗಿರಿಜಾ ಲೋಕೇಶ್ ‘ಸುಬ್ಬಲಕ್ಷ್ಮಿ ಸಂಸಾರ’ ‘ಜೇನುಗೂಡು’ ‘ಪ್ರೀತಿಯ ಅರಸಿ’ ಸೇರಿದಂತೆ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದು, ಇತ್ತೀಚಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನೂರು ಜನ್ಮಕೂ’ ಧಾರವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.