
ಹಿರಿಯ ಬಾಲಿವುಡ್ ನಟ ಮಿಥಿಲೇಶ್ ಚತುರ್ವೇದಿ ವಿಧಿವಶರಾಗಿದ್ದಾರೆ. ಅವರು ಆಗಸ್ಟ್ 3ರ ರಾತ್ರಿ ಹೃದಯ ಸಂಬಂಧಿ ಕಾಯಿಲೆಗಳ ಕಾರಣಕ್ಕೆ ಲಕ್ನೋದಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಬಳಿಕ ಡಿಸ್ಚಾರ್ಜ್ ಆಗಿದ್ದರು. ನಂತರ ವಿಶ್ರಾಂತಿಗಾಗಿ ತಮ್ಮ ತವರು ಲಕ್ನೋ ಗೆ ತೆರಳಿದ್ದು ಅಲ್ಲಿಯೇ ಮೃತಪಟ್ಟಿದ್ದಾರೆ. ಈ ವಿಚಾರವನ್ನು ಅವರ ಅಳಿಯ ಆಶೀಶ್ ಚತುರ್ವೇದಿ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ದಶಕಗಳಿಂದಲೂ ಬಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಅವರು ಹೃತಿಕ್ ರೋಷನ್ ಜೊತೆ ಕೊಯಿ ಮಿಲ್ ಗಯಾ, ಸನ್ನಿ ಲಿಯೋನ್ ಜೊತೆ ಗದರ್ ಏಕ್ ಪ್ರೇಮ್ ಕಥಾ, ತಾಲ್, ರೆಡಿ, ಸತ್ಯಾ, ಬಂಟಿ ಅವರ ಬಬ್ಲಿ, ಕ್ರಿಶ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.
ಅಷ್ಟೇ ಅಲ್ಲ, ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದ ಮಿಥಿಲೇಶ್ ಚತುರ್ವೇದಿ, ಕಿರುತೆರೆಯಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದರು. ಮಿಥಿಲೇಶ್ ಚತುರ್ವೇದಿ ನಿಧನಕ್ಕೆ ಬಾಲಿವುಡ್ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.