alex Certify ಅಲ್ಜೈಮರ್ಸ್ ಗೆ ಪರಿಹಾರ ಈ ರೀತಿಯ ಆರೈಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಲ್ಜೈಮರ್ಸ್ ಗೆ ಪರಿಹಾರ ಈ ರೀತಿಯ ಆರೈಕೆ

ಅಲ್ಜೈಮರ್ಸ್ ಎಂದರೆ ಮರೆವಿನ ಕಾಯಿಲೆ ಯಾರನ್ನು ಬೇಕಿದ್ದರೂ ಬಿಡದೆ ಕಾಡಬಹುದು. ಇದಕ್ಕೆ ವಂಶವಾಹಿನಿಯೂ ಕೆಲವೊಮ್ಮೆ ಕಾರಣವಾಗಬಹುದು. ಇದರ ಲಕ್ಷಣಗಳನ್ನು ನೀವು ಅರಂಭದಲ್ಲೇ ಗುರುತಿಸಬಹುದು.

ಇತ್ತೀಚೆಗೆ ಕಲಿತ ವಿಷಯಗಳನ್ನು ಮರೆಯುವುದು, ಪದೇ ಪದೇ ಒಂದೇ ವಿಷಯದ ಬಗ್ಗೆ ಮಾಹಿತಿ ಕೇಳುವುದು, ಮೊಬೈಲ್ ಅಥವಾ ಕುಟುಂಬ ಸದಸ್ಯರನ್ನು ಪ್ರತಿಯೊಂದಕ್ಕೂ ಅವಲಂಬಿಸುವುದು ಇದರ ಆರಂಭಿಕ ಲಕ್ಷಣಗಳು.

ನಿಮಗೆ ಈ ಹಿಂದೆ ಸುಲಭದಲ್ಲಿ ಬಿಡಿಸಲು ಸಾಧ್ಯವಾಗುತ್ತಿದ್ದ ಲೆಕ್ಕಗಳನ್ನು ಹ್ಯಾಂಡಲ್ ಮಾಡಲು ಕಷ್ಟವಾಗಬಹುದು. ಏಕಾಗ್ರತೆ ಕಡಿಮೆಯಾಗಿ, ನಿತ್ಯ ಮಾಡುತ್ತಿದ್ದ ಕೆಲಸಗಳೇ ಮರೆತು ಹೋಗಬಹುದು.

ಮರೆವಿನ ರೋಗಕ್ಕೆ ತುತ್ತಾದ ವ್ಯಕ್ತಿ ತನ್ನ ನಿತ್ಯದ ಕೆಲಸಗಳನ್ನು ಮಾಡಿ ಮುಗಿಸಲು ಮರೆತೇ ಹೋಗುತ್ತಾನೆ. ವಾಹನ ಚಲಾಯಿಸುವಾಗ ಮನೆಯ ದಾರಿ ಮರೆತು ಹೋಗುವುದು, ವಾಕಿಂಗ್ ಮುಗಿಸಿ ಮನೆ ಹುಡುಕಲು ಕಷ್ಟವಾಗುವುದು, ಆಟದ ನಿಯಮಗಳನ್ನು ಮರೆತು ಹೋಗುವುದು ಮೊದಲಾದ ಸಮಸ್ಯೆಗಳು ಕಂಡು ಬಂದಾವು.

ಈ ರೋಗಿಗಳನ್ನು ಪ್ರೀತಿಯಿಂದ ಆರೈಕೆ ಮಾಡುವುದು ಮತ್ತು ಕಣ್ಣಿನಲ್ಲಿ ಕಣ್ಣಿಟ್ಟು ನೋಡಿಕೊಳ್ಳುವುದು ಬಹಳ ಮುಖ್ಯ. ಮಾತನಾಡಲೂ ಕಷ್ಟಪಡುವ ಅವರಿಗೆ ಆಸರೆಯಾಗಿ ನಿಂತು ನಿತ್ಯದ ಕೆಲಸವನ್ನು ಪೂರ್ಣಗೊಳಿಸಲು ಹೇಳಿಕೊಡುವ ಮೂಲಕ ಅವರಿಗೆ ಬೆಂಗಾವಲಾಗಬೇಕು. ಮೆದುಳಿಗೆ ಕೆಲಸ ಕೊಡುವ ಆಟಗಳನ್ನು ಆಡುವವರು ಈ ರೋಗಕ್ಕೆ ತುತ್ತಾಗುವುದು ಅಪರೂಪ ಎಂಬುದನ್ನು ವಿಜ್ಞಾನ ದೃಢಪಡಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...