ಭಾರತದ ಮೊಟ್ಟಮೊದಲ ಏಕ ವ್ಯಕ್ತಿ ವಿವಾಹದ ಪ್ರಕರಣದಲ್ಲಿ ಈಗ ಒಂದು ಸ್ವಾರಸ್ಯಕರ ಬೆಳವಣಿಗೆ ನಡೆಯುವುದಿದೆ. ತನ್ನನ್ನೇ ತಾನು ಮದುವೆಯಾದ 24 ವರ್ಷದ ಕ್ಷಮಾ ಬಿಂದು ಇದೀಗ ಏಕಾಂಗಿಯಾಗಿ ಹನಿಮೂನ್ಗೆ ತೆರಳಲು ಸಜ್ಜಾಗಿದ್ದಾರೆ. ಮತ್ತು ಅವರು ಗೋವಾವನ್ನು ಹನಿಮೂನ್ ತಾಣವಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ನವ ವಧು ತನ್ನ ಏಕವ್ಯಕ್ತಿ ಮಧುಚಂದ್ರಕ್ಕಾಗಿ ಎದುರು ನೋಡುತ್ತಿದ್ದಾಳೆ ಮತ್ತು ತನ್ನ ಜೀವನದ ಈ ಹೊಸ ಅಧ್ಯಾಯವನ್ನು ಅನ್ವೇಷಿಸಲು ಹೊರಟಿದ್ದಾಳೆ.
ಯಾವುದೇ ವಧುವಿನಂತೆ, ನನ್ನ ಹನಿಮೂನ್ ಬಗ್ಗೆ ನಾನು ತುಂಬಾ ಉತ್ಸುಕಳಾಗಿದ್ದೇನೆ. ನಾನು ಆಗಸ್ಟ್ 7ರಂದು ಗೋವಾಕ್ಕೆ ತೆರಳುತ್ತೇನೆ ಮತ್ತು ಅಲ್ಲಿ ನನ್ನ ಎಲ್ಲಾ ವಿಶೇಷ ಕ್ಷಣಗಳನ್ನು ನನ್ನ ಮೊಬೈಲ್ ಫೋನ್ನಲ್ಲಿ ರೆಕಾರ್ಡ್ ಮಾಡುತ್ತೇನೆ ಎಂದಿದ್ದಾಳಾಕೆ.
ಗೋವಾ ನನ್ನ ನೆಚ್ಚಿನ ಮತ್ತು ಕನಸಿನ ತಾಣಗಳಲ್ಲಿ ಒಂದಾಗಿದೆ. ನಾನು ರೋಮಾಂಚಕ ಅರಂಬೋಲ್ ಬೀಚ್ನಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತೇನೆ ಎಂದಿರುವ ಆಕೆ, ತನ್ನ ಸಂಗಾತಿಯ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಲು ತಾನು ಸಜ್ಜಾಗಿದ್ದೇನೆ ಎಂದೂ ಹೇಳಿದ್ದಾರೆ.
ನಾನು ಹನಿಮೂನ್ನಲ್ಲಿರುವಾಗ, ನಾನು ಮದುವೆಯಾಗಿದ್ದೇನೆ ಎಂದು ಜನರು ತಿಳಿದುಕೊಳ್ಳುತ್ತಾರೆ ಮತ್ತು ನನ್ನ ಗಂಡನ ಬಗ್ಗೆ ಸ್ಪಷ್ಟವಾಗಿ ಕೇಳುತ್ತಾರೆ. ಅವರಿಗೆ ಏಕಾಂಗಿತ್ವದ ಬಗ್ಗೆ ಮತ್ತು ನಾನು ನನ್ನನ್ನು ಏಕೆ ಮದುವೆಯಾಗಿದ್ದೇನೆ ಎಂಬುದನ್ನು ವಿವರಿಸಲು ನನಗೆ ಅವಕಾಶ ಸಿಗುತ್ತದೆ ಎಂದು ಆಕೆ ಹೇಳಿದ್ದಾರೆ.
ಮದುವೆಯ ನಂತರದ ತಮ್ಮ ಜೀವನದ ಬಗ್ಗೆ ಮಾತನಾಡುತ್ತಾ, ತಾನು ಸಂತೋಷವಾಗಿದ್ದೇನೆ ಮತ್ತು ನವವಿವಾಹಿತರು ಮಾಡುವ ಎಲ್ಲವನ್ನೂ ಆನಂದಿಸುತ್ತಿದ್ದೇನೆ ಎಂದು ಹೇಳಿದರು.
ಜೂನ್ 9 ರಂದು ತನ್ನ ಮನೆಯಲ್ಲಿ ನಡೆದ ವಿಸ್ತೃತ ಸಮಾರಂಭದಲ್ಲಿ ವಡೋದರ ಮೂಲದ ಕ್ಷಮಾ ಬಿಂದು ತನ್ನೊಂದಿಗೆ ತಾನೇ ಮದುವೆ ಮಾಡಿಕೊಂಡಿದ್ದಾಳೆ.
ಅವಳು ತನ್ನನ್ನು ದ್ವಿಲಿಂಗಿ ಎಂದು ಗುರುತಿಸಿಕೊಂಡಿದ್ದಾಳೆ. ಆಕೆಯ ವಿವಾಹ ಸಮಾರಂಭದಲ್ಲಿ ಪುರೋಹಿತರಿರಲಿಲ್ಲ. ವರನಿಲ್ಲದಿದ್ದರೂ ವಿವಾಹ ಸಮಾರಂಭ 40 ನಿಮಿಷಗಳ ಕಾಲ ನಡೆಯಿತು.
ಆಕೆಯ ಏಕವ್ಯಕ್ತಿ ವಿವಾಹದ ಚಿತ್ರಗಳಲ್ಲಿ ಬಿಂದು ಕೆಂಪು ಲೆಹೆಂಗಾವನ್ನು ಧರಿಸಿದ್ದು, ಚುರಾ ಮತ್ತು ವರ್ಮಲವನ್ನು ಧರಿಸಿ ಸಿಂಧೂರವನ್ನು ತನ್ನ ಹಣೆಗೆ ಸ್ವತಃ ಹಾಕುವಂತೆ ತೋರಿಸಿದೆ. ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಬಿಂದು, ಸ್ವಯಂ ವಿವಾಹವನ್ನು ತಮ್ಮದೇ ವ್ಯಾಖ್ಯಾನ ಮಾಡಿದ್ದಾರೆ.