ಸೋರೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸಿ ರುಚಿಕರವಾದ ಪಲ್ಯ ಮಾಡುವ ವಿಧಾನ ಇಲ್ಲಿದೆ ನೋಡಿ
ಬೇಕಾಗುವ ಸಾಮಗ್ರಿಗಳು :
1 ಸೋರೆಕಾಯಿ, 2 ಕ್ಯಾರೆಟ್, 4 ಈರುಳ್ಳಿ, 3 ಹಸಿಮೆಣಸು, 1/2 ಚಮಚ ಲಿಂಬೆ ರಸ, ರುಚಿಗೆ ತಕಷ್ಟು ಉಪ್ಪು, 1/2 ಚಮಚ ಅರಿಶಿನ ಪುಡಿ, 1 ಕಪ್ ಕಾಯಿ ತುರಿ, 1 ಚಮಚ ಉದ್ದಿನಬೇಳೆ, 1 ಚಮಚ ಸಾಸಿವೆ, 2 ಚಮಚ ಖಾರದ ಪುಡಿ, 15 – 20 ಎಸಳು ಕರಿಬೇವು.
ಮಾಡುವ ವಿಧಾನ :
ಮೊದಲಿಗೆ ಸೋರೆಕಾಯಿ ಸಿಪ್ಪೆಯನ್ನು ತೆಗೆದು ಸಣ್ಣಗೆ ಹಚ್ಚಿಕೊಳ್ಳಿ ನಂತರ ಕ್ಯಾರೆಟ್ ಅನ್ನು ಸಹ ಸಣ್ಣಗೆ ಹೆಚ್ಚಿಕೊಳ್ಳಿ. ನಂತರ ಗ್ಯಾಸ್ ಆನ್ ಮಾಡಿ ಬಾಣಲೆಯನ್ನಿಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಅದಕ್ಕೆ ಸಾಸಿವೆ ಹಾಕಿ ಸಾಸಿವೆ ಸಿಡಿದಾಗ ಉದ್ದಿನಬೇಳೆ ಹಾಗೂ ಕರಿಬೇವು ಹಾಕಿ ಒಗ್ಗರಣೆ ಮಾಡಿ ಅದಕ್ಕೆ ಅರಿಶಿನಪುಡಿ, ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
ನಂತರ ಸೋರೆಕಾಯಿ ಮತ್ತು ಕ್ಯಾರೆಟ್ ಹಾಕಿ ಫ್ರೈ ಮಾಡಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಅದು ಬೆಂದ ಮೇಲೆ ಅದಕ್ಕೆ ತೆಂಗಿನಕಾಯಿ ತುರಿಯನ್ನು ಮತ್ತು ಖಾರದ ಪುಡಿ ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಕೈಯಾಡಿಸಿ ಈಗ ರುಚಿಯಾದ ಸೋರೆಕಾಯಿ ಕ್ಯಾರೆಟ್ ಪಲ್ಯ ರೆಡಿ. ಇದನ್ನು ಚಪಾತಿ, ದೋಸೆ, ರೊಟ್ಟಿ ಹಾಗೂ ಅನ್ನದ ಜೊತೆ ಸೇವಿಸಬಹುದು.