alex Certify 4 ದಿನಗಳ ನಂತರ ಈ ರಾಶಿಯವರಿಗೆ ಒಲಿಯುತ್ತಾಳೆ ಲಕ್ಷ್ಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

4 ದಿನಗಳ ನಂತರ ಈ ರಾಶಿಯವರಿಗೆ ಒಲಿಯುತ್ತಾಳೆ ಲಕ್ಷ್ಮಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಈ ಗ್ರಹ ಭೌತಿಕ ಸುಖ, ವೈವಾಹಿಕ ಸುಖ, ಕಲೆ, ಪ್ರತಿಭೆ, ಸೌಂದರ್ಯ, ದೈಹಿಕ ಸುಖ ಮತ್ತು ಫ್ಯಾಶನ್ ಡಿಸೈನಿಂಗ್ ಮುಂತಾದವುಗಳಲ್ಲಿ ಉನ್ನತಿಯನ್ನು ನೀಡುತ್ತದೆ.

ಶುಕ್ರ ಗ್ರಹದಲ್ಲಿ ಶುಭವಾದರೆ ಲಕ್ಷ್ಮಿಯ ಕೃಪೆ ಯಾವಾಗಲೂ ಇರುತ್ತದೆ. ಶುಕ್ರ, ಡಿಸೆಂಬರ್ 8 ರಂದು ಧನ ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಶುಕ್ರ, ಮಕರ ರಾಶಿಗೆ ಪ್ರವೇಶ ಮಾಡಿದರೆ ಅನೇಕ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗಲಿವೆ. ಇನ್ನು 4 ದಿನಗಳಲ್ಲಿ ಯಾವ ಯಾವ ರಾಶಿಗಳಿಗೆ ಶುಕ್ರನ ಅನುಗ್ರಹ ಸಿಗಲಿದೆ ಎಂಬುದನ್ನು ನೋಡೋಣ.

ಮೇಷ : ಶುಕ್ರನ ಗೋಚರ ಕಾಲ ನಿಮಗೆ ಶುಭವಾಗಲಿದೆ. ಈ ಸಮಯದಲ್ಲಿ ನಿಮಗೆ ನಿಮ್ಮ ಗುಪ್ತ ಶತ್ರುಗಳಿಂದ ಮುಕ್ತಿ ಸಿಗಲಿದೆ. ನೀವು ಕಾರ್ಯಕ್ಷೇತ್ರದಲ್ಲಿ ಹೆಚ್ಚು ಕಷ್ಟಪಡಬೇಕಾಗುತ್ತದೆ. ಆದರೆ ಕೊನೆಗೆ ಸಫಲತೆ ಸಿಗಲಿದೆ. ಧನ ಲಾಭವಾಗಲಿದೆ. ಸಂಗಾತಿಯೊಂದಿಗೆ ಒಳ್ಳೆಯ ಸಮಯ ಕಳೆಯುತ್ತೀರಿ. ನಿಮಗೆ ಕುಟುಂಬದ ಬೆಂಬಲ ಸಿಗಲಿದೆ.

ವೃಷಭ : ವೃಷಭ ರಾಶಿಯವರಿಗೆ ಶುಕ್ರನ ಗೋಚರ ಕಾಲ ಲಾಭದಾಯಕವಾಗಿದೆ. ಕಾರ್ಯಕ್ಷೇತ್ರದಲ್ಲಿ ಉನ್ನತಮಟ್ಟಕ್ಕೆ ಏರುತ್ತೀರಿ. ಆದಾಯ ಹೆಚ್ಚಲಿದೆ. ಸುಖ-ಸೌಲಭ್ಯಗಳಲ್ಲಿ ಏಳ್ಗೆಯಾಗುತ್ತದೆ. ಯಾತ್ರೆಗೆ ಹೋಗುವ ಸಂಭವವಿದೆ. ಆರ್ಥಿಕ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ.

ಮಿಥುನ : ಈ ರಾಶಿಯವರಿಗೂ ಶುಕ್ರನ ಗೋಚರದಿಂದ ಲಾಭವಿದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ. ಸಂಸಾರದೊಂದಿಗೆ ಒಳ್ಳೆಯ ಸಮಯ ಕಳೆಯಲಿದ್ದೀರಿ. ಪಾರ್ಟನರ್ ಜೊತೆ ಸಂಬಂಧ ಚೆನ್ನಾಗಿರುತ್ತದೆ. ಆರೋಗ್ಯದ ಸಮಸ್ಯೆಗಳು ಕಡಿಮೆಯಾಗುತ್ತದೆ.  ಭವಿಷ್ಯದಲ್ಲಿ ಏಳ್ಗೆಯಾಗಲಿದೆ.

ಕನ್ಯಾ :  ಕನ್ಯಾ ರಾಶಿಯವರಿಗೆ ಶುಕ್ರನ ಗೋಚರದಿಂದ ಅನುಕೂಲವಾಗಲಿದೆ. ಈ ಸಮಯದಲ್ಲಿ ನೀವು ವಾಹನ ಅಥವಾ ಭೂಮಿಯನ್ನು ಖರೀದಿಸಬಹುದು. ಭೂಮಿಯ ಮೇಲೆ ಹಣ ಹೂಡಿಕೆ ಮಾಡುವುದರಿಂದ ನಿಮಗೆ ಹೆಚ್ಚು ಲಾಭವಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ಪಾರ್ಟನರ್ ಸಲಹೆಯಿಂದ ನಿಮಗೆ ಧನ ಲಾಭವಾಗಲಿದೆ. ವೈವಾಹಿಕ ಜೀವನ ಸುಖಕರವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...