ಜಾರ್ಖಂಡ್ನ ಜಸಿದಿಹ್ನಿಂದ ರೈಲಿನಲ್ಲಿ ಗೋವಾಕ್ಕೆ ತೆರಳುತ್ತಿದ್ದ ವೃದ್ಧ ದಂಪತಿಗೆ ಕೆಳಗಿನ ಬರ್ತ್ನ ಕಿಟಕಿ ಪರದೆಯ ಹಿಂದೆ ಹಾವು ಕಂಡುಬಂದಿದೆ. ಇದರಿಂದ ಅವರು ಬೆಚ್ಚಿಬಿದ್ದಿದ್ದು, ಬಳಿಕ ಸಂಬಂಧಪಟ್ಟವವರಿಗೆ ಮಾಹಿತಿ ನೀಡಿದ ಮೇರೆಗೆ ಹಾವನ್ನು ಸೆರೆ ಹಿಡಿಯಲಾಗಿದೆ.
ವೃದ್ದ ದಂಪತಿಗಳು ಕಿಟಕಿಯ ಪರದೆಯ ಹಿಂದೆ ಏನೋ ಹರಿದಾಡುತ್ತಿರುವುದನ್ನು ಗಮನಿಸಿದ್ದು, ಸೂಕ್ಷ್ಮವಾಗಿ ಪರಿಶೀಲಿಸಿದಾಗ ವಿಷಕಾರಿ ಹಾವು ಪತ್ತೆಯಾಗಿದೆ. ಅವರು ತಕ್ಷಣ ತಮ್ಮ ಮಗನಿಗೆ ಮಾಹಿತಿ ನೀಡಿದ್ದು, ಅವರು ಸಹಾಯಕ್ಕಾಗಿ IRCTC ಸಿಬ್ಬಂದಿಯನ್ನು ಸಂಪರ್ಕಿಸಿದ್ದರು.
ತನ್ನ ಪೋಷಕರಿಗೆ ಟಿಕೆಟ್ ಕಾಯ್ದಿರಿಸಿದ್ದ ಯುವಕ ಘಟನೆಯ ವೀಡಿಯೊವನ್ನು ‘X’ ನಲ್ಲಿ ಬರ್ತ್ ಮತ್ತು ರೈಲು ಸಂಖ್ಯೆಯೊಂದಿಗೆ ಹಂಚಿಕೊಂಡಿದ್ದಾನೆ.
“ಹಾಯ್ @IRCTCofficial @RailMinIndia ಟ್ರೇನ್ -17322 (ಜಸಿದಿಹ್ ನಿಂದ ವಾಸ್ಕೋ ಡಿ ಗಾಮಾ) ನಲ್ಲಿ 21 ನೇ ಅಕ್ಟೋಬರ್ ರಂದು ಬರ್ತ್ನಲ್ಲಿ ಕಂಡುಬಂದ ಹಾವು AC 2 ಶ್ರೇಣಿಯಲ್ಲಿ ಪ್ರಯಾಣಿಸುತ್ತಿರುವ ನನ್ನ ಪೋಷಕರ ಪರವಾಗಿ ದೂರು ನೀಡುತ್ತಿದ್ದು,(A2 31 , 33) ದಯವಿಟ್ಟು ತಕ್ಷಣ ಕ್ರಮ ಕೈಗೊಳ್ಳಿ ಎಂದಿದ್ದರು.
ಸಿನ್ಹಾ ಅವರ ಟ್ವೀಟ್ಗೆ ರೈಲ್ವೇ ಸೇವಾ ತಂಡವು ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ್ದು, ಸಮಸ್ಯೆಯನ್ನು ಪರಿಹರಿಸಲಾಗಿದೆ. ರೈಲ್ವೆ ಸಿಬ್ಬಂದಿ ಆಗಮಿಸಿ ವಿಷಕಾರಿ ಹಾವನ್ನು ಹಿಡಿದು ರೈಲಿನಿಂದ ಹೊರ ತೆಗೆದಿದ್ದಾರೆ. ಜಾರ್ಖಂಡ್ ಮತ್ತು ಗೋವಾ ನಡುವೆ ಸಂಚರಿಸುವ ವಾಸ್ಕೋ-ಡಗಾಮಾ ವೀಕ್ಲಿ ಎಕ್ಸ್ಪ್ರೆಸ್ನಲ್ಲಿ ಈ ಘಟನೆ ನಡೆದಿದೆ.
ಭಾರತೀಯ ರೈಲ್ವೇ ರೈಲಿನಲ್ಲಿ ಹಾವುಗಳು ಕಂಡು ಬರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಸೆಪ್ಟೆಂಬರ್ನಲ್ಲಿ ಗರೀಬ್ ರಥ ಎಕ್ಸ್ಪ್ರೆಸ್ನಲ್ಲಿ (12187) ಐದು ಅಡಿ ಉದ್ದದ ಹಾವು ಕಂಡುಬಂದಿದ್ದು, ಇದು ಪ್ರಯಾಣಿಕರನ್ನು ಭಯಭೀತಗೊಳಿಸಿತ್ತು.