ಜಪಾನಿನ ಪಟ್ಟಣವೊಂದು ವಿತರಣಾ ಯಂತ್ರದಿಂದ ಕರಡಿ ಮಾಂಸವನ್ನು ಮಾರಾಟ ಮಾಡುತ್ತಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಏಷ್ಯನ್ ಕಪ್ಪು ಕರಡಿಗಳ ಮಾಂಸವನ್ನು ವಿತರಣಾ ಯಂತ್ರದ ಸಹಾಯದಿಂದ ಮಾರಾಟ ಮಾಡಲಾಗುತ್ತಿದೆ. ಬಲೆಗಳಲ್ಲಿ ಅಥವಾ ಪರ್ವತಗಳಲ್ಲಿ ಬೇಟೆಗಾರರಿಂದ ಸಿಕ್ಕಿಬಿದ್ದ ಪ್ರಾಣಿಗಳು ಇವಾಗಿವೆ.
ಕಾಡುಗಳಲ್ಲಿ ಆಹಾರದ ಕೊರತೆಯಿಂದಾಗಿ ಗ್ರಾಮೀಣ ಜಪಾನ್‌ನ ಕೆಲವು ಭಾಗಗಳಲ್ಲಿ ಕರಡಿ ದಾಳಿಯು ಹೆಚ್ಚುತ್ತಿರುವ ಸಮಸ್ಯೆಯಾಗಿದೆ, ಜನವಸತಿ ಪ್ರದೇಶಗಳಿಗೆ ಇವು ಬರುತ್ತಿದ್ದು, ಇದನ್ನೇ ಬೇಟೆಗಾರರು ಮಾಂಸಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.
“ಕರಡಿಗಳು ಪಟ್ಟಣಕ್ಕೆ ಬಂದಾಗ ಅವು ಅಪಾಯಕಾರಿಯಾಗಬಹುದು, ಆದ್ದರಿಂದ ಬೇಟೆಗಾರರು ಬಲೆಗಳನ್ನು ಸ್ಥಾಪಿಸುತ್ತಾರೆ ಅಥವಾ ಅವುಗಳನ್ನು ಶೂಟ್ ಮಾಡುತ್ತಾರೆ” ಎಂದು ಡೈಶಿ ಸಾಟೊ ಹೇಳಿದರು.
ಜಪಾನ್‌ನಲ್ಲಿ ಕರಡಿ ತಿನ್ನುವುದು ಕಾನೂನುಬದ್ಧವಾಗಿದೆ. ಸಾಟೊ ಪ್ರಕಾರ ರಕ್ತವು ತಕ್ಷಣವೇ ಬರಿದಾಗುವುದರಿಂದ ಸಿಕ್ಕಿಬಿದ್ದ ಕರಡಿಗಳ ಮಾಂಸವು ರುಚಿಯಾಗಿರುತ್ತದೆ ಎನ್ನುತ್ತಾರೆ.
ಮಾಂಸ ಮಾರಾಟದಿಂದ ಸರಾಸರಿ ವಾರದಲ್ಲಿ 2,200 ಯೆನ್ (ಸುಮಾರು 1,400 ರೂಪಾಯಿ) ಬೆಲೆಯ 250 ಗ್ರಾಂಗಳ 10 ಪ್ಯಾಕ್‌ಗಳನ್ನು ಮಾರಾಟ ಮಾಡುತ್ತಾರೆ.