ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನ ನಿಯಂತ್ರಿಸುವ ಸಲುವಾಗಿ ದೆಹಲಿ ಸರ್ಕಾರ ಕ್ರಮಗಳನ್ನ ಕೈಗೊಳ್ತಾ ಇದ್ದು, ಇದರನ್ವಯ ಜುಲೈ 1ನೇ ತಾರೀಖಿನಿಂದ ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್ ಹೊಂದಿರದ ವಾಹನಗಳು ದೆಹಲಿಗೆ ಪ್ರವೇಶಿಸುವಂತಿಲ್ಲ ಎಂದು ಹೇಳಿದೆ.
ಆರ್ಎಫ್ಐಡಿ ವಿಚಾರವಾಗಿ ಪ್ರಮುಖ ಮಾಹಿತಿಯನ್ನ ನೀಡಿರುವ ದಕ್ಷಿಣ ದೆಹಲಿ ಮುನ್ಸಿಪಾಲ್ ಕಾರ್ಪೋರೇಷನ್, ನಗರದ 124 ಟೋಲ್ ಪ್ಲಾಜಾಗಳಲ್ಲಿ ಆರ್ಎಫ್ಐಡಿ ಸಿಸ್ಟಂ ಅಳವಡಿಸಲಾಗಿದೆ. ಅಲ್ಲದೇ ಆರ್ಎಫ್ಐಡಿ ರಿಚಾರ್ಜ್ ವಿಚಾರವಾಗಿಯೂ ಜನರಿಗೆ ಮಾಹಿತಿ ನೀಡಲು ಪಾಲಿಕೆ ಅಪ್ಲಿಕೇಶನ್ ಒಂದನ್ನ ಅಭಿವೃದ್ಧಿ ಮಾಡಿದೆ ಎಂದು ಹೇಳಿದೆ.
ದೆಹಲಿಯಲ್ಲಿ ಈ ಮೊದಲು 13 ಪ್ಲಾಜಾಗಳಲ್ಲಿ ಮಾತ್ರ ಆರ್ಎಫ್ಐಡಿ ವ್ಯವಸ್ಥೆಯನ್ನ ಇಡಲಾಗಿತ್ತು. ಇದೀಗ ಇದು 124 ಟೋಲ್ಗಳಲ್ಲಿ ಅಳವಡಿಸಲಾಗಿದೆ. ಇದೀಗ ಜುಲೈ 1ರಿಂದ ಆರ್ಎಫ್ಐಡಿ ಕಡ್ಡಾಯವಾಗಿ ದೆಹಲಿಯಾದ್ಯಂತ ಜಾರಿಗೆ ಬರಲಿದೆ.
ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯದ ಪ್ರಮಾಣ ಅತಿಯಾಗೋದ್ರಲ್ಲಿ ವಾಣಿಜ್ಯ ವಾಹನಗಳ ಕೊಡುಗೆ ತುಂಬಾನೇ ಇದೆ. ಹೀಗಾಗಿ ಜನವರಿ 1ರಿಂದ 13 ಪ್ಲಾಜಾಗಳಲ್ಲಿ ಆರ್ಎಫ್ಐಡಿ ಕಡ್ಡಾಯಗೊಳಿಸಲಾಗಿತ್ತು. ಇದೀಗ 124 ಟೋಲ್ಗಳಿಗೂ ಆರ್ಎಫ್ಐಡಿ ವಿಸ್ತರಣೆಯಾಗಿದ್ದು ಈ ಟ್ಯಾಗ್ ಹೊಂದಿರದ ವಾಹನಗಳಿಗೆ ರಾಷ್ಟ್ರ ರಾಜಧಾನಿಗೆ ಜುಲೈ 1ರಿಂದ ಪ್ರವೇಶ ಇರೋದಿಲ್ಲ ಎಂದು ಅಧಿಕೃತವಾಗಿ ತಿಳಿಸಲಾಗಿದೆ.