alex Certify ರಸ್ತೆಗಳಲ್ಲಿ ಇನ್ಮುಂದೆ ಕೇಳಲಿದೆ ತಬಲಾ, ವೀಣೆ, ಕೊಳಲಿನ ಸದ್ದು : ಹೊಸ ಯೋಜನೆ ಬಗ್ಗೆ ಸುಳಿವು ನೀಡಿದ ಗಡ್ಕರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆಗಳಲ್ಲಿ ಇನ್ಮುಂದೆ ಕೇಳಲಿದೆ ತಬಲಾ, ವೀಣೆ, ಕೊಳಲಿನ ಸದ್ದು : ಹೊಸ ಯೋಜನೆ ಬಗ್ಗೆ ಸುಳಿವು ನೀಡಿದ ಗಡ್ಕರಿ..!

ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ತಲೆಯಲ್ಲಿ ನೂರೆಂಟು ಪ್ಲಾನ್​ಗಳು ಇವೆ ಅನ್ನೋ ಮಾತನ್ನು ತಳ್ಳಿ ಹಾಕುವಂತಿಲ್ಲ. ಗಡ್ಕರಿ ಪ್ಲಾನ್​ಗಳು ಜಾರಿಗೆ ಬರುತ್ತವೋ ಇಲ್ಲವೋ ಹೇಳಲಾಗದು. ಆದರೆ ಇವರ ಕಲ್ಪನೆ ಮಾತ್ರ ವಿಶೇಷವಾಗಿಯೇ ಇರುತ್ತದೆ.

ಇದೀಗ ಇದೇ ಮಾತಿಗೆ ಪುಷ್ಠಿ ಎಂಬಂತೆ ಗಡ್ಕರಿ ಇನ್ನೊಂದು ಹೊಸ ಐಡಿಯಾವನ್ನು ಮಾಡಿದ್ದಾರೆ. ಈ ಬಾರಿ ಇವರ ಪ್ಲಾನ್​ಗೆ ವಾಹನಗಳ ಹಾರ್ನ್​ಗಳು ಸಿಕ್ಕಿವೆ. ವಾಹನಗಳ ಕಿರಿಕಿರಿ ಶಬ್ದದಿಂದ ಪಾರಾಗುವ ಸಲುವಾಗಿ ಕೇಂದ್ರ ಸಚಿವ ನಿತಿನ್​ ಗಡ್ಕರಿ ಭಾರತೀಯ ಸಂಗೀತ ವಾದ್ಯಗಳ ಸದ್ದನ್ನು ಹಾರ್ನ್​ ಬಳಸುವ ಹೊಸ ಕಾನೂನನ್ನು ಜಾರಿಗೆ ತರುವ ಬಗ್ಗೆ ಯೋಚಿಸುತ್ತಿರೋದಾಗಿ ಹೇಳಿದ್ದಾರೆ.

ನಿಮ್ಮ ಮಕ್ಕಳೂ ಜಾಣರಾಗಬೇಕಾ….? ಹಾಗಾದರೆ ಓದುವ ಕೋಣೆಯ ಬಗ್ಗೆ ನೀವು ತಿಳಿಯಲೇಬೇಕು ಈ ಅಂಶ….!

ಆ್ಯಂಬುಲೆನ್ಸ್​ಗಳು ಹಾಗೂ ಪೊಲೀಸ್​ ವಾಹನಗಳಿಗೆ ಬಳಕೆ ಮಾಡುವ ಸೈರನ್​ಗಳ ಬದಲಾಯಿಸುವ ಬಗ್ಗೆ ಯೋಚನೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಹೆದ್ದಾರಿ ಉದ್ಘಾಟನೆ ಕಾರ್ಯಕ್ರಮದ ವೇಳೆ ಗಡ್ಕರಿ ಈ ಹೇಳಿಕೆಯನ್ನು ನೀಡಿದ್ದಾರೆ.

ಈ ಎಲ್ಲಾ ಸೈರನ್​ ಸದ್ದುಗಳಿಗೆ ಅಂತ್ಯ ಹಾಡುವ ಬಗ್ಗೆ ನಾನು ಯೋಚನೆ ಮಾಡುತ್ತಿದ್ದೇನೆ. ಆಂಬುಲೆನ್ಸ್​ ಹಾಗೂ ಪೊಲೀಸ್​​ ವಾಹನದಲ್ಲಿ ಬಳಸುವ ಸೈರನ್​ಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ. ಕಲಾವಿದರೊಬ್ಬರು ಸಂಯೋಜಿಸಿರುವ ಆಕಾಶವಾಣಿ (ಆಲ್​ ಇಂಡಿಯಾ ರೇಡಿಯೋ) ಟ್ಯೂನ್​ನ್ನು ಆ್ಯಂಬುಲೆನ್ಸ್​ಗೆ ಬಳಕೆ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದೇನೆ.

ರಾಜ್ಯ ಸರ್ಕಾರಿ ನೌಕರರ ದುರ್ನಡತೆ ಆರೋಪ ವಿಚಾರಣೆ, ಶಿಸ್ತುಕ್ರಮಕ್ಕೆ ಸಮಯ ನಿಗದಿ

ಸಚಿವರು ರಸ್ತೆಯಲ್ಲಿ ಹಾದು ಹೋಗುವಾಗ ವಾಹನಗಳಲ್ಲಿ ಕೇಳುವ ಕೆಟ್ಟ ಸೈರನ್​ ಶಬ್ದವು ನಿಜಕ್ಕೂ ಕಿರಿಕಿರಿ ಎನಿಸುತ್ತದೆ. ಹೀಗಾಗಿ ವಾಹನಗಳಲ್ಲಿ ಭಾರತದ ಸಂಗೀತ ವಾದ್ಯಗಳಾದ ಕೊಳಲು, ತಬಲಾ, ವಯೋಲಿನ್, ಹಾರ್ಮೋನಿಯಂ ಶಬ್ದಗಳನ್ನು ಬಳಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...