ವಾಹನ ಖರೀದಿಸಿದ ವೇಳೆ ಅದರ ಮಾಲೀಕರು ಫ್ಯಾನ್ಸಿ ನಂಬರ್ ಬಯಸುವುದು ಸಹಜ. ಕೆಲವರು ತಮಗೆ ಅದೃಷ್ಟ ತರುತ್ತದೆ ಎಂಬ ಕಾರಣಕ್ಕೆ ಇಂತಹುದೇ ಸಂಖ್ಯೆ ಇರಲಿ ಎಂಬುದನ್ನು ಬಯಸುತ್ತಾರೆ.
ಹೀಗಾಗಿಯೇ ಭಾರತದಲ್ಲಿ ಫ್ಯಾನ್ಸಿ ನಂಬರ್ ಗಳನ್ನು ಹರಾಜು ಹಾಕುವ ಮೂಲಕ ಸಾರಿಗೆ ಇಲಾಖೆ ಆದಾಯ ಗಳಿಸುತ್ತಿದೆ. ಆದರೆ ದುಬೈನಲ್ಲಿ ವ್ಯಕ್ತಿಯೊಬ್ಬರು ತಮ್ಮ ಕಾರಿನ ಫ್ಯಾನ್ಸಿ ನಂಬರ್ ಗಾಗಿ ತೆತ್ತಿರುವ ಬೆಲೆಯಂತೂ ತಲೆ ತಿರುಗಿಸುವಂತಿದೆ.
ಹೌದು, AA8 ಫ್ಯಾನ್ಸಿ ನಂಬರ್ ಗಾಗಿ ಅಬುದಾಬಿಯಲ್ಲಿ ನಡೆದ ಹರಾಜಿನಲ್ಲಿ ದುಬೈ ವ್ಯಕ್ತಿ ಬರೋಬ್ಬರಿ 72.08 ಕೋಟಿ ರೂಪಾಯಿಗಳನ್ನು ತೆತ್ತಿದ್ದಾರೆ. ಆದರೆ ಅಚ್ಚರಿಯ ಸಂಗತಿಯೆಂದರೆ ಇದು ಜಗತ್ತಿನ ಮೂರನೇ ದುಬಾರಿ ಫ್ಯಾನ್ಸಿ ನಂಬರ್ ಪ್ಲೇಟ್ ಅಂತೆ. ಈ ಹಿಂದೆ AA9 ನಂಬರ್ 79 ಕೋಟಿ ರೂಪಾಯಿಗಳಿಗೆ ಮಾರಾಟವಾಗಿತ್ತಂತೆ.