ಗದಗ: ವಾಹನಗಳಿಗೆ ಅಳವಡಿಸಲಾಗುವ ನೋಂದಣಿ ಸಂಖ್ಯೆ ಫಲಕಗಳು ಕೇಂದ್ರ ಮೋಟಾರು ವಾಹನ ನಿಯಮಾವಳಿಯ ನಿಯಮ 50 ಮತ್ತು 51 ಕ್ಕೆ ಅನುಗುಣವಾಗಿ ಇರಬೇಕಾಗಿದೆ.
ಅನೇಕ ವಾಹನಗಳು ನಿಯಮಗಳ ಉಲ್ಲಂಘನೆ ಮಾಡಿ, ವಾಹನಗಳ ನೋಂದಣಿ ಸಂಖ್ಯೆ ಫಲಕಗಳನ್ನು ಅಳವಡಿಸುತ್ತಿದ್ದು, ಇವುಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತಿದೆ.
ಉಚ್ಛ ನ್ಯಾಯಾಲಯವು ಆದೇಶ ಜಾರಿ ಮಾಡಿ, ವಾಹನಗಳ ನೋಂದಣಿ ಸಂಖ್ಯಾ ಫಲಕಗಳಲ್ಲಿ ನೋಂದಣಿ ಸಂಖ್ಯೆಯನ್ನು ಹೊರತುಪಡಿಸಿ ಇನ್ಯಾವುದೇ ಬರಹ ಬರೆಸಿರುವುದು ಕಂಡು ಬಂದಲ್ಲಿ, ಅಂದರೆ ಸಂಘ ಸಂಸ್ಥೆಗಳ ಹೆಸರು, ಹುದ್ದೆಗಳ ಹೆಸರು, ಇಲಾಖೆಯಗಳ ಹೆಸರು ಇನ್ನಿತರೆ ಬರಹಗಳು ಕಂಡು ಬಂದಲ್ಲಿ ಅಂತಹ ವಾಹನಗಳ ನೋಂದಣಿ ಸಂಖ್ಯಾ ಫಲಕಗಳನ್ನು ಕೂಡಲೇ ತೆರವುಗೊಳಿಸಲು ಹಾಗೂ ಅಂತಹ ವಾಹನಗಳ ವಿರುಧ್ದ ಕಾನೂನು ಕ್ರಮ ಜರುಗಿಸುವಂತೆ ಆದೇಶಿಸಿದೆ.
ದೋಷಪೂರಿತ ನೋಂದಣಿ ಸಂಖ್ಯಾ ಫಲಕ ಅಳವಡಿಸಿರುವ ವಾಹನಗಳ ವಿರುಧ್ದ ತಪಾಸಣಾ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಇಂತಹ ವಾಹನಗಳ ಮಾಲೀಕರು ಕೂಡಲೇ ದೋಷಪೂರಿತ ವಾಹನ ನೋಂದಣಿ ಸಂಖ್ಯೆ ಫಲಕಗಳನ್ನು ತೆಗೆಸಬೇಕೆಂದು ಗದಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಿಂದ ಮಾಹಿತಿ ನೀಡಲಾಗಿದೆ.