ನಾನ್ ವೆಜ್ ಒಳ್ಳೆಯದು ಅನಾದಿಕಾಲದಿಂದನೂ ತಿಂದ್ಕೊಂಡು ಬಂದಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ತಿನ್ನಲ್ವಾ? ಅವರಿಗೆಲ್ಲ ಏನೂ ಆಗಲ್ಲ, ಇಲ್ಲಿ ಹೇಗೆ ತೊಂದರೆ ಆಗತ್ತೆ? ಮಾಂಸಾಹಾರ ಒಳ್ಳೆಯದು ಎಂದು ಸಸ್ಯಾಹಾರಿ ಡಾಕ್ಟರ್ ಒಬ್ಬರು ಮಾಂಸಾಹಾರದ ಮಹತ್ವ ವಿವರಿಸಿದ್ದಾರೆ.
ತುಮಕೂರು ಸಿದ್ದಗಂಗಾ ಆಸ್ಪತ್ರೆಯ ಹೃದಯರೋಗ ತಜ್ಞ ಡಾ.ಭಾನುಪ್ರಕಾಶ್, ಎಂಬುವವರು ಮಾಂಸಾಹಾರ ತಿನ್ನಬೇಕು ಒಳ್ಳೆಯದು ಎಂದು ರೋಗಿಯೊಬ್ಬರಿಗೆ ಹೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೌಥ್ ಕೊರಿಯಾ, ಥೈಲಾಂಡ್, ವಿಯೆಟ್ನಾಂ ಎಲ್ಲಾ ದೇಶಗಲ್ಲಿ ಪ್ರತಿದಿನ ನಾನ್ ವೆಜ್ ತಿನ್ನುತ್ತಾರೆ. ಅವರಿಗೆಲ್ಲ ಏನೂ ಆಗಲ್ಲ, ಯಾವ ಹಾರ್ಟ್ ಅಟ್ಯಾಕ್ ಕೂಡ ಆಗಲ್ಲ. ನಮ್ಮಲ್ಲಿ ಮಾತ್ರ ಯಾಕೆ ಆಗುತ್ತೆ ? ಹೇಗೆ ಬೇಯಿಸುತ್ತಾರೆ ಎಂಬುದು ಮುಖ್ಯ. ನಾವೆಲ್ಲ ಬೆಣ್ಣೆ ಹಾಕಿಬಿಟ್ಟೆ, ತುಪ್ಪ ಹಾಕಿಬಿಟ್ಟೆ. ಫ್ರೈ ಮಾಡಿಬಿಟ್ಟೆ, ಮೂರು ಮೂರು ಸಲ ತಿಂದೆ…. ಜಾಸ್ತಿ ತಿಂದುಬಿಟ್ಟೆ… ಎಂದು ಪ್ರಾಬ್ಲಮ್ ಮಾಡಿಕೊಳ್ಳುತ್ತಿದ್ದೇವೆ. ಎಷ್ಟುಬೇಕೋ ಅಷ್ಟು ಬೇಯಿಸಿ ತಿಂದರೆ ಏನೂ ಸಮಸ್ಯೆಯಾಗಲ್ಲ ಎಂದಿದ್ದಾರೆ.
ಮನೆಯಲ್ಲಿಯೇ ಮಾಡಿ ತಿನ್ನಬೇಕು ಅದರಲ್ಲಿಯೂ ಬಿಳಿ ಮಾಂಸ ತುಂಬಾ ಒಳ್ಳೆಯದು. ಕೆಂಪು ಮಾಂಸದಲ್ಲಿ ರೆಡಿಮೇಡ್ ಕೊಲೆಸ್ಟ್ರಾಲ್ ಇರುವುದರಿಂದ ಅದು ಅಷ್ಟು ಒಳ್ಳೆಯದಲ್ಲ. ಹಾಗಂತ ತಿನ್ನಲೇಬಾರದು ಅಂತಿಲ್ಲ, ತಿನ್ನಬಹುದು ಆದರೆ ಕೆಂಪು ಮಾಂಸ ಕಡಿಮೆ ತಿನ್ನುವುದು ಒಳ್ಳೆಯದು ಎಂದಿದ್ದಾರೆ.
ಅದರಲ್ಲೂ ಸೀ ಫುಡ್ ಆರೋಗ್ಯಕ್ಕೆ ಬಹಳ ಉತ್ತಮ. ಇನ್ನು ಮೊಟ್ಟೆ ತಿನ್ನಬೇಕು. ಅದರಲ್ಲಿಯೂ ಮೊಟ್ಟೆಯ ಹಳದಿ ಭಾಗವನ್ನೇ ತಿನ್ನಬೇಕು. ಅದೇ ಜೀವ. ಅದರಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಇರುತ್ತದೆ. ನಾಳೆಯಿಂದಲೇ ಎಲ್ಲಾ ಶುರುಮಾಡಿ. ನಾನು ವೆಜಿಟೇರಿಯನ್ ಆದರೂ ಹೇಳುತ್ತಿದ್ದೇನೆ ಎಂದು ವೈದ್ಯರ ಬಳಿ ಚಿಕಿತ್ಸೆಗೆ ಬಂದ ರೋಗಿಗಳಿಗೆ ಸಲಹೆ ನೀಡಿದ್ದಾರೆ. ಸಸ್ಯಾಹಾರಿ ಹೃದಯರೋಗ ತಜ್ಞ ವೈದ್ಯರ ಮಾಂಸಾಹಾರದ ಮಹತ್ವ ಕುರಿತ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.