ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ತರಕಾರಿ ತರ ದಿನೇ ದಿನೇ ಹೆಚ್ಚಳವಾಗುತ್ತಿದೆ.
ಬಿಸಿಲು, ಮುಂಗಾರುಪೂರ್ವ ಮಳೆಯ ಪರಿಣಾಮ ಸಗಟು ಮಾರುಕಟ್ಟೆಗೆ ತರಕಾರಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ದೀರ್ಘಾವಧಿಗೆ ತರಕಾರಿ ದರ ಹೆಚ್ಚಳ ಆಗಿರುವುದು ದಿನಬಳಕೆ ಮಾತ್ರವಲ್ಲದೆ, ಮದುವೆ, ಗೃಹಪ್ರವೇಶದಂತಹ ಕಾರ್ಯಕ್ರಮಗಳ ಖರ್ಚು ವೆಚ್ಚವನ್ನು ಹೆಚ್ಚಳ ಮಾಡಲಾಗಿದೆ. ಹೋಟೆಲ್, ಕೇಟರಿಂಗ್ ಗಳ ಮೇಲೆಯೂ ತರಕಾರಿ ದರ ಹೆಚ್ಚಳ ಪರಿಣಾಮ ಬೀರಿದೆ.
ಬೀನ್ಸ್ ದರ ಕೆಜಿಗೆ 250 ರೂ., ಕ್ಯಾರೆಟ್ 100 ರೂ., ಕ್ಯಾಪ್ಸಿಕಂ 90 ರೂ., ಬದನೆಕಾಯಿ 85 ರೂ. ವರೆಗೆ ಮಾರಾಟವಾಗುತ್ತಿದ್ದು, ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಬೆಂಗಳೂರಿನ ಪ್ರಮುಖ ಸಗಟು ಮಾರುಕಟ್ಟೆಗಳಾದ ಕೆಆರ್ ಮಾರುಕಟ್ಟೆ, ಯಶವಂತಪುರ, ಬಿನ್ನಿ ಮಿಲ್, ಕಲಾಸಿಪಾಳ್ಯ ಮೊದಲಾದ ತರಕಾರಿ ಮಾರುಕಟ್ಟೆಗಳಿಗೆ ಬರುವ ತರಕಾರಿ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ. ಕಳೆದ ವಾರ ಸುರಿದ ಮಳೆಗೆ ತರಕಾರಿಗಳು ಹಾನಿಯಾಗಿದ್ದು, ಬೆಲೆ ಏರಿಕೆ ಮುಂದುವರೆದಿದೆ.