ಆರೋಗ್ಯಕ್ಕೂ ಒಳ್ಳೆಯದಾದ ವೆಜಿಟೆಬಲ್ ಉಪ್ಮಾ ಮಾಡೋದು ಬಹಳ ಸುಲಭ.
ವೆಜಿಟೆಬಲ್ ಉಪ್ಮಾ ಮಾಡಲು ಬೇಕಾಗುವ ಪದಾರ್ಥ:
1 ಕಪ್ ಅಕ್ಕಿ
½ ಕಪ್ ಉದ್ದಿನ ಬೇಳೆ
ರುಚಿಗೆ ತಕ್ಕಷ್ಟು ಉಪ್ಪು
10 ಕರಿ ಬೇವು
ಚಿಟಕಿ ಹಿಂಗು
ಒಂದು ಚಮಚ ಶುಂಠಿ ಪೇಸ್ಟ್
ಒಂದು ಕಪ್ ಕತ್ತರಿಸಿದ ಈರುಳ್ಳಿ, ಟೋಮೋಟೋ, ಕ್ಯಾರೆಟ್, ಮೆಣಸು ಹಾಗೂ ಅವರೆಕಾಳು
ವೆಜಿಟೆಬಲ್ ಉಪ್ಮಾ ಮಾಡುವ ವಿಧಾನ : ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು 5 ಗಂಟೆ ನೆನೆಸಿಡಿ. ನಂತ್ರ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಅದಕ್ಕೆ ಉಪ್ಪು, ಕರಿಬೇವಿನ ಎಲೆ, ಹಿಂಗು, ಶುಂಠಿ ಪೇಸ್ಟ್, ಈರುಳ್ಳಿ, ಟೋಮೋಟೋ, ಕ್ಯಾರೆಟ್, ಮೆಣಸು, ಅವರೆಕಾಳು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೆಲ ಸಮಯ ಮಿಶ್ರಣವನ್ನು ಹಾಗೆ ಬಿಡಿ. ನಂತ್ರ ದೋಸಾ ತವೆಯನ್ನು ಬಿಸಿ ಮಾಡಿ ಅದರ ಮೇಲೆ ಮಿಶ್ರಣವನ್ನು ಹಾಕಿ. ಅದ್ರ ಮೇಲೆ ಸ್ವಲ್ಪ ಎಣ್ಣೆ ಹಾಕಿ. ಬೆಂದ ನಂತ್ರ ಇನ್ನೊಂದ ಕಡೆ ಬೇಯಿಸಿ. ಚಟ್ನಿ ಜೊತೆ ಸರ್ವ್ ಮಾಡಿ.