ಮುಂಗಾರು ಹಂಗಾಮಿನ ಮಳೆ ಸುರಿಯದ ಕಾರಣ ತರಕಾರಿ ಬೆಲೆ ಗಗನಕ್ಕೇರಿದ್ದು, ಟೊಮ್ಯಾಟೊ ನೂರರ ಸನಿಹದತ್ತ ಹೋಗಿದೆ. ಬೀನ್ಸ್ ದ್ವಿಶತಕ ದಾಟಿದೆ.
ಹೌದು, ತರಕಾರಿ ಬೆಲೆ ಬಾರಿ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಬೀನ್ಸ್ ಕೆಜಿಗೆ 200 ರೂ ಮಾರಾಟವಾಗುತ್ತಿದ್ದು, ಟೊಮ್ಯಾಟೋ 70-80 ರೂಗೆ ಮಾರಾಟವಾಗುತ್ತಿದೆ. ಈರುಳ್ಳಿ ಬೆಲೆ ಕೂಡ ಹೆಚ್ಚಳವಾಗಿದ್ದು, 20 ರೂ ಇದ್ದ ಈರುಳ್ಳಿ 30 ರೂಗೆ ಮಾರಾಟವಾಗುತ್ತಿದೆ. ಬೆಂಡೆಕಾಯಿ ಕೆಲವು ಕಡೆ 80 ರೂಗೆ ಮಾರಾಟವಾಗುತ್ತಿದೆ.
ಇನ್ನೂ ಮೂಲಂಗಿ 70-80 ರೂ ದರವಿದ್ದು, ಲಿಂಬೆಹಣ್ಣು 10 ರೂಗೆ ಮಾರಾಟವಾಗುತ್ತಿದೆ. ಪಾಲಕ್, ಮೆಂತೆ, ಕೊತ್ತಂಬರಿ, ಪುದೀನಾ ಸೊಪ್ಪು ಕಟ್ಟಿಗೆ 20 ರಿಂದ 25 ರೂಗೆ ಮಾರಾಟವಾಗುತ್ತಿದೆ. ತಾಪಮಾನ ಏರಿಕೆ, ಮಳೆಯಿಂದಾಗಿ ತರಕಾರಿ ಮತ್ತು ಸೊಪ್ಪುಗಳ ದರ ಗಗನಕ್ಕೇರಿವೆ ಮುಂಗಾರು ಮಳೆ ಕೈಕೊಟ್ಟಿದ್ದು ತರಕಾರಿಗೆ ಬೇಡಿಕೆ ಹೆಚ್ಚಾಗಿದೆ.