ಮೆಲ್ಬೋರ್ನ್: ಮಾಂಸಕ್ಕಾಗಿ ಪ್ರಾಣಿಗಳ ಮರಿಗಳನ್ನು ಕೊಂದು ಮಾಂಸ ಮಾರಾಟ ಮಾಡುತ್ತಿರುವವರ ವಿರುದ್ಧ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ಸಸ್ಯಾಹಾರಿಗಳ ಗುಂಪು ವಿಭಿನ್ನವಾಗಿ ಪ್ರತಿಭಟನೆ ನಡೆಸಿವೆ.
ಕೆಲ ದಿನಗಳ ಹಿಂದಷ್ಟೇ ಸಸ್ಯಾಹಾರಿ ಪ್ರತಿಭಟನಾಕಾರರು ರೆಸ್ಟೋರೆಂಟ್ ವೊಂದಕ್ಕೆ ನುಗ್ಗಿ, ಎಲ್ಲೆಡೆ ನಕಲಿ ರಕ್ತ ಸುರಿದು ಪ್ರತಿಭಟನೆ ನಡೆಸಿದ್ರು. ಪ್ರತಿಭಟನಾಕಾರರಲ್ಲಿ ಒಬ್ಬರಾದ ತಾಶ್ ಪೀಟರ್ಸನ್ ಅವರು ಸೂಪರ್ ಮಾರ್ಕೆಟ್ ನೊಳಗೆ ನುಗ್ಗಿ ಸತ್ತಿದ್ದ ಕುರಿಮರಿಯನ್ನು ಟ್ರಾಲಿಯ ಮೇಲೆ ಎಸೆದು ತಮ್ಮ ಕೋಪವನ್ನು ಹೊರ ಹಾಕಿದ್ರು. ಇದಕ್ಕೂ ಮೊದಲು ಬಿಳಿ ಏಪ್ರನ್ ಧರಿಸಿ ಕೆ ಎಫ್ ಸಿ ರೆಸ್ಟೋರೆಂಟ್ ಗೆ ನುಗ್ಗಿ, ಮೈಮೇಲೆ ಹಾಗೂ ನೆಲದ ಮೇಲೆ ನಕಲಿ ರಕ್ತ ಚೆಲ್ಲಿದ್ದರು.
BIG NEWS: ಮೆಣಸೆಯಲ್ಲಿ ಮಹಿಳೆ ಮೇಲೆ ಆಸಿಡ್ ದಾಳಿ ಪ್ರಕರಣ; ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ
ಮಾಂಸ ತಿನ್ನುವುದರಿಂದ ಪ್ರಾಣಿಗಳು ಸಾಯುತ್ತವೆ ಎಂಬ ಸಂದೇಶ ಕೊಡುವುದು ಮಾತ್ರ ಇವರ ಮುಖ್ಯ ಉದ್ದೇಶವಾಗಿತ್ತು. ‘’ಮಾಂಸದ ಅಂಗಡಿಯಲ್ಲಿ ಪ್ರಾಣಿಗಳ ಮರಿಗಳನ್ನು ಮಾಂಸಕ್ಕಾಗಿ ಸಾಯಿಸಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಪ್ರತಿವರ್ಷ 15 ಮಿಲಿಯನ್ ಕುರಿಮರಿಗಳನ್ನು ಸಾಯಿಸಲಾಗುತ್ತದೆ.
ಮರಿಗಳನ್ನು ಹತ್ಯೆ ಮಾಡುವ ಕಾರ್ಖಾನೆಗಳಿಗೆ ಕಳುಹಿಸುತ್ತಿದ್ದೀರಿ. ಡೈರಿ ಮತ್ತು ಮೊಟ್ಟೆ ಉದ್ಯಮದಲ್ಲಿ ಗಂಡುಮರಿಗಳನ್ನು ಕೊಲ್ಲಲಾಗುತ್ತದೆ. ಯಾಕೆಂದರೆ ಅವುಗಳನ್ನು ತ್ಯಾಜ್ಯ ಉತ್ಪನ್ನಗಳಾಗಿ ನೋಡಲಾಗುತ್ತದೆ. ಆ ಶಿಶುಗಳ ಸಾವಿಗೆ ನೀವೇ ಕಾರಣ (ಮಾಂಸಾಹಾರಿಗಳು).’’ ಎಂದು ಫೇಸ್ ಬುಕ್ ಪೇಜ್ ನಲ್ಲಿ ಪೀಟರ್ಸನ್ ಭಾವುಕರಾಗಿ ಬರೆದುಕೊಂಡಿದ್ದಾರೆ.