ಭಾರತ ಸೇರಿ ಇಡೀ ವಿಶ್ವದಲ್ಲಿ ಮದುವೆ ಅನ್ನೋದು ಅತಿ ದೊಡ್ಡ ಸಂಭ್ರಮ. ಈ ಸಂದರ್ಭದಲ್ಲಿ ಪ್ರತಿಯೊಂದು ಪರ್ಫೆಕ್ಟ್ ಆಗಿರಬೇಕು ಎಂದು ಪ್ರತಿಯೊಬ್ಬರು ಬಯಸುತ್ತಾರೆ. ಅದ್ರಲ್ಲು ಊಟದ ವಿಚಾರದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುತ್ತವೆ.
ಇತ್ತೀಚೆಗೆ ವೀಗನ್ ಆಹಾರ ಪದ್ಧತಿ ಚಾಲ್ತಿಗೆ ಬಂದಿದ್ದು, ಮದುವೆಗಳ ಮೆನ್ಯುದಲ್ಲಿ ಈ ಆಹಾರವನ್ನು ಸೇರಿಸಲಾಗ್ತಿದೆ. ಇಲ್ಲೊಂದು ಮದುವೆಯಲ್ಲಿ ಇದೇ ಪ್ರಯತ್ನ ಮಾಡಲಾಗಿದ್ದು, ಮದುವೆಗೆ ಬಂದ ವೀಗನ್ ಆಹಾರಪದ್ಧತಿ ಅನುಸರಿಸುವ ಗೆಸ್ಟ್ ಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಒಬ್ಬ ಮಹಿಳೆ ಮದುವೆ ಮೆನ್ಯುವಿನ ವೀಗನ್ ಫುಡ್ ಆಪ್ಷನ್ ಎಂದು ಒಂದು ಚಿತ್ರವನ್ನ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು ವೀಗನ್ ಆಹಾರ ಪದ್ಧತಿ ಅನುಸರಿಸುವವರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ಲೇಟ್ ಅರ್ಧದಷ್ಟು ರಾಕೆಟ್ ಪ್ಲಾಂಟ್ ನಿಂದ ತುಂಬಿದೆ, ಅದನ್ನ ಒಂದಿಷ್ಟ ಬಾಲ್ಸಾಮಿಕ್ನಿಂದ ಗಾರ್ನಿಷ್ ಮಾಡಿ ಕಲ್ಲಂಗಡಿಯ ಮೂರು ಸ್ಲೈಸ್ಗಳನ್ನ ನೀಡಲಾಗಿದೆ.
ಈ ಪೋಸ್ಟ್ ನೋಡಿರುವ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಜವಾಗಿಯೂ ಕಳಪೆ ಊಟೋಪಚಾರ. ಮದುವೆಗೆ ಹೋಗಿ ಉಡುಗೊರೆ ನೀಡುವವರಿಗೆ ಕನಿಷ್ಠ ಒಳ್ಳೆ ಊಟದ ಮೂಲಕ ಉಪಚರಿಸಬೇಕು ಎಂದು ಒಬ್ಬರು ಬರೆದರೆ. ಮತ್ತೊಬ್ಬರು ಮದುವೆಯ ಮನೆಗಳಲ್ಲಿ ಅಡುಗೆ ಮಾಡುವವರು ಸೋಮಾರಿಗಳಾಗಿದ್ದಾರೆ. ಅದ್ಭುತವಾದ ವೀಗನ್ ಆಹಾರವನ್ನು ತಯಾರಿಸುವುದು ಕಷ್ಟವೇನಲ್ಲ ಎಂದು ಬರೆದಿದ್ದಾರೆ. ಇನ್ನೊಬ್ಬರು, ಅಡುಗೆ ತಯಾರಿಸುವ ಷೆಪ್ ಗಳಿಗೆ ಪ್ಲಾಂಟ್ ಬೇಸ್ಡ್ ವೀಗನ್ ಆಹಾರದ ಬಗ್ಗೆ ಒಂದಿಷ್ಟು ತಿಳಿದಿಲ್ಲಾ. ಸಪ್ಪೆ ಆಹಾರ ಎಂದು ಆಡಿಕೊಳ್ಳುತ್ತಾ ಸಿಗುವ ಮಸಾಲೆಯನ್ನೆಲ್ಲಾ ಸೇರಿಸುತ್ತಾರೆ ಎಂದು ಬರೆದಿದ್ದಾರೆ.
ಒಟ್ನಲ್ಲಿ ನಿಮ್ಮ ಮದುವೆಯಲ್ಲಿ ವೀಗನ್ ಆಹಾರ ಪೂರೈಸಲು ನಿರ್ಧರಿಸಿದರೆ ಅದರ ಬಗ್ಗೆ ತಿಳಿದುಕೊಂಡು, ನಿಮ್ಮ ಷೆಫ್ ಹೇಗೆ ನಿರ್ವಹಿಸುತ್ತಿದ್ದಾರೆ ಎಂದು ಮೇಲ್ವಿಚಾರಣೆ ಮಾಡಿ. ಇಲ್ಲವಾದರೆ ನಿಮ್ಮ ಮದುವೆಯ ಮೆನ್ಯು ಸಹ ಸಾಮಾಜಿಕ ಜಾಲತಾಣದ ಚರ್ಚಾ ವಿಷಯವಾಗಿ ಬದಲಾಗಬಹುದು.